ಕಸ್ತೂರಿ ರಂಗನ್ ವರದಿ ವಿರೋಧಿಸಿ ಸೆ. 3 ಕ್ಕೆ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಸಭೆ..
ಕಿಮ್ಮನೆ ರತ್ನಾಕರ್ ಚಿಲ್ಲರೆ ರಾಜಕಾರಣ ಮಾಡುವುದು ಬಿಡಬೇಕು
ತೀರ್ಥಹಳ್ಳಿ : ಸೆ. 3 ರಂದು ಮಧ್ಯಾಹ್ನ 3 ಕ್ಕೆ ತೀರ್ಥಹಳ್ಳಿಯ ಗೋಪಾಲಗೌಡ ರಂಗಮಂದಿರದಲ್ಲಿ ಜನ ಜೀವನಕ್ಕೆ ಭಾದೆ ತರುವಂತ ಕಸ್ತೂರಿ ರಂಗನ್ ವರದಿ ವಿರೋಧಿಸಿ ಶಾಸಕನಾಗಿ ಯಾವೆಲ್ಲಾ ಗ್ರಾಮಗಳು ಇದರಿಂದ ತೊಂದರೆ ಉಂಟಾಗಿದೆಯೋ ಆ ಗ್ರಾಮಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳ ಜೊತೆಗೆ ಸಭೆ ಕರೆಯಲಾಗಿದೆ. ಒಕ್ಕೊರಲಿನಿಂದ ಈ ವರದಿ ವಿರೋಧಿಸಲು ಪಕ್ಷಾತೀತವಾಗಿ ಸಭೆ ನಡೆಯಲಿದೆ ಪ್ರತಿಯೊಬ್ಬರು ಭಾಗಿಯಾಗಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು..
ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಸ್ತೂರಿ ರಂಗನ್ ವರದಿಯನ್ನು ಮೊದಲಿಂದಲೂ ವಿರೋಧಿಸುತ್ತಾ ಬಂದಿದ್ದೇನೆ. ಸಿದ್ದರಾಮಯ್ಯ, ಯಡಿಯೂರಪ್ಪ, ಬೊಮ್ಮಾಯಿ ಅವರ ನಮ್ಮ ಸರ್ಕಾರ ಯಾರದ್ದೇ ಇದ್ದರೂ ಅದನ್ನು ವಿರೋಧಿಸುತ್ತಾ ಬಂದಿದ್ದೇನೆ. ರಾಜ್ಯಸರ್ಕಾರದಿಂದ ವಿರೋಧಿಸಿದ ಆ ವೇಳೆ ಹಾಗೂ ಸಭೆಯಲ್ಲಿ ನಾನು ಕೂಡ ಪ್ರಮುಖ ಪಾತ್ರ ವಹಿಸಿದ್ದೇನೆ.. ಜನರಿಗೆ ಕಷ್ಟ ಆಗುವುದಾದರೆ ಮತ್ತೊಂದು ವರದಿ ತಯಾರಿಸುತ್ತೇನೆ ಎಂಬುದಾಗಿ ಹೇಳಿದ್ದರು..
ಸಂಜಯ್ ಕುಮಾರ್ ಎಂಬ ಐ ಎಫ್ ಸಿ ಅಧಿಕಾರಿಯ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಆರು ರಾಜ್ಯಗಳಲ್ಲಿ ಅವರು ಪರಿಶೀಲನೆ ನಡೆಸಿದ್ದರು.. ಸೆ. 27 ರವರೆಗೆ ಆ ಸಮಿತಿ ವಿಸ್ತರಿಸಲಾಗಿದೆ ಎಂದರು..
ಇದನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂಬ ಮಾತು ಹಲವರಿಂದ ಕೇಳಿಬರುತ್ತಿದೆ ಆದರೆ ಕೇಂದ್ರ ಸರ್ಕಾರ ಮಾಡುತ್ತಿಲ್ಲ, ಗೋವಾ ಫೌಂಡೇಶನ್ ಎಂಬ ಸಂಘಟನೆ ಈ ವರದಿ ಮಾಡಲು ಕಾರಣವಾಗಿದೆ.. ಇದರಲ್ಲಿ ಯಾವುದೇ ರಾಜಕಾರಣ ಇಲ್ಲ. ಇದೊಂದು ಅವೈಜ್ಞಾನಿಕ ವರದಿ ಇದನ್ನು ಮಾಡಬಾರದು ಎಂಬುದಾಗಿ ಹೇಳಿತ್ತು. ಆದರೆ ಸುಪ್ರೀಂ ಕೋರ್ಟ್ ನಲ್ಲಿ ಈಗಲೂ ಕೇಸ್ ನಡೆಯುತ್ತಿದೆ. ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ನೋಟಿಸ್ ಕೊಡುತ್ತಿದೆ.. ಇದನ್ನು ಕೇಂದ್ರ ಸರ್ಕಾರ ಮಾಡುವುದಾಗಿದ್ದರೆ ಯಾವಾಗಲೋ ಮಾಡಬಹುದಾಗಿತ್ತು. ಈಗ ಬೀಸುವ ದೊಣ್ಣೆಯನ್ನು ತಪ್ಪಿಸಿಕೊಳ್ಳಬೇಕಾಗಿದೆ ಎಂದರು..
ಕರ್ನಾಟಕ ರಾಜ್ಯ ಸರ್ಕಾರಕ್ಕೂ ಹೇಳಿದ್ದೇವೆ. ಕೋರ್ಟ್ ಗಳು ಪರಿಸರ ಪರವಾಗಿ ಇರುತ್ತವೆ. ಹಾಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಆ ಫೀಲ್ಡ್ ನಲ್ಲಿ ಪರಿಶೀಲನೆ ನಡೆಸಬೇಕು ಈಗ ಕೋರ್ಟ್ ನಿಂದ ಏಳನೇ ನೋಟಿಫಿಕೇಷನ್ ಬಂದಿರುವುದರಿಂದ ಮತ್ತೆ ಈ ವಿಷಯ ಬಂದಿದೆ. ಹಾಗಾಗಿ ಇಲ್ಲಿನ ಜನರೆಲ್ಲರೂ ಹಾಗೂ ಶಾಸಕರು ಸೇರಿ ನಿರ್ಣಯ ಮಾಡಬೇಕು.. ಇಲ್ಲಿ ಪಕ್ಷ ನೋಡದೆ ಪಕ್ಷದಿಂದ ಹೊರಬಂದು ಸಭೆಯಲ್ಲಿ ಭಾಗಿಯಾಗಬೇಕು, ತೀರ್ಥಹಳ್ಳಿಯಲ್ಲಿ 157 ಗ್ರಾಮ ಇರುವುದರಿಂದ ಪ್ರತಿಯೊಬ್ಬರೂ ಭಾಗಿಯಾಗಬೇಕು, ಎಲ್ಲರೂ ಸೇರಿ ನಿರ್ಣಯ ತೆಗೆದುಕೊಳ್ಳಬೇಕು ಎಂದರು..
ಕಿಮ್ಮನೆ ರತ್ನಾಕರ್ ಕಸ್ತೂರಿ ರಂಗನ್ ವರದಿ ಪ್ರತಿ ಸುಟ್ಟು ಹಾಕಿದ ಬಗ್ಗೆ ಮಾತನಾಡಿ ಕಿಮ್ಮನೆಯವರ ರಾಜಕೀಯ ಆಸಕ್ತಿಯೇ ಬೇರೆ, ಸುಡುವುದು, ಟೀಕೆ ಮಾಡುವುದು, ಅದರ ಬಗ್ಗೆ ನಾನು ಮಾತನಾಡುವುದಿಲ್ಲ, ಕೇಂದ್ರ ಸರ್ಕಾರ ನಿರ್ಧಾರ ಮಾಡುವುದಾದರೆ ರಾಜ್ಯ ಸರ್ಕಾರವನ್ನು ಕೇಳುತ್ತಾ ಇರಲಿಲ್ಲ, ರಾಜ್ಯದ ಜನರಿಗೆ ಮಾರಕ ಆಗಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಕೇಳಿದೆ.. ಈಗ ವರದಿ ಪ್ರತಿ ಸುಡುವ ಬದಲು ಯುಪಿಎ ಸರ್ಕಾರದಲ್ಲಿ ಮೊದಲ ನೋಟಿಫಿಕೇಷನ್ ಬಂದಾಗಲೇ ಸುಡಬಹುದಿತ್ತಲ್ಲವೇ? ಎಂದು ಪ್ರೆಶ್ನೆ ಮಾಡಿದರು..
ಮನಮೋಹನ್ ಸಿಂಗ್ ಇರುವಾಗಲೇ ಕಸ್ತೂರಿ ರಂಗನ್ ವರದಿ ಮೊದಲ ನೋಟಿಫಿಕೇಷನ್ ಬಂದಿದ್ದು, ಆಗ ಕಿಮ್ಮನೆಯವರೆ ಶಾಸಕರು ಆಗ ಏನು ಮಾಡುತ್ತಿದ್ದರು? ಕಿಮ್ಮನೆಯವರು ಚಿಲ್ಲರೆ ರಾಜಕಾರಣ ಮಾಡುವುದು ಬಿಡಬೇಕು ಎಂದರು..
ಈ ಸಂದರ್ಭದಲ್ಲಿ ನಾಗರಾಜ್ ಶೆಟ್ಟಿ, ಸೊಪ್ಪುಗುಡ್ಡೆ ರಾಘವೇಂದ್ರ, ಕುಕ್ಕೆ ಪ್ರಶಾಂತ್ ಸೇರಿ ಹಲವರು ಉಪಸ್ಥಿತರಿದ್ದರು..
Tags:
ಆರಗ ಜ್ಞಾನೇಂದ್ರ