ಆರಗ ಜ್ಞಾನೇಂದ್ರರಿಗೆ ರಾಕಿ ಕಟ್ಟಿದ ಬಿಜೆಪಿ ಮಹಿಳಾ ಮಣಿಗಳು
ತೀರ್ಥಹಳ್ಳಿ : ರಕ್ಷಾ ಬಂಧನ ಹಿನ್ನಲೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಮಹಿಳೆಯರೆಲ್ಲರೂ ಅಣ್ಣನ ಸ್ಥಾನದಲ್ಲಿರುವ ಶಾಸಕರಾದ ಆರಗ ಜ್ಞಾನೇಂದ್ರ ಅವರಿಗೆ ರಾಖಿ ಕಟ್ಟಿ ಸಂಭ್ರಮಿಸಿದರು..
ತೀರ್ಥಹಳ್ಳಿಯ ಶಾಸಕರ ಕಚೇರಿಯಲ್ಲಿ ಜ್ಞಾನೇಂದ್ರ ಅವರಿಗೆ ರಾಖಿ ಕಟ್ಟಿದ ಮಹಿಳಾ ಮಣಿಗಳು ನಂತರ ಮಹಿಳಾ ಮಣಿಗಳು ಆಶೀರ್ವಾದ ಪಡೆದರು.. ಈ ವೇಳೆ ಎಲ್ಲರಿಗೂ ಒಳ್ಳೆಯದಾಗಲಿ.. ಎಲ್ಲರೂ ಸೇರಿ ರಾಖಿ ಕಟ್ಟುತ್ತೀರಾ ಅಥವಾ ಬೇರೆ ಬೇರೆ ಕಟ್ಟುತ್ತೀರಾ ಎಂಬುದಾಗಿ ಶಾಸಕರು ಕೇಳಿದಾಗ ಅಲ್ಲಿದ್ದ ಪತ್ರಕರ್ತರು ಹಣ ಕೊಡಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಹೀಗೆ ಕೇಳುತ್ತಿದ್ದೀರಾ? ಎಂಬುದಾಗಿ ಹಾಸ್ಯ ಭರಿತವಾಗಿ ಕೇಳಿದರು..
ಇದಕ್ಕೆ ಉತ್ತರಿಸಿದ ಶಾಸಕರು ರಾಖಿ ಕಟ್ಟುವುದು ಅಣ್ಣ ಎಂಬ ಕಾರಣಕ್ಕೆ, ಆಶೀರ್ವಾದ ಸಾಕು ಎಂದು ಹಾಸ್ಯ ಚಟಾಕಿ ಹಾರಿಸಿದರು..