ಚಹಾ ಕುಡಿಯಲು ಹೋಟೆಲ್ ಗೆ ಬಂದ್ರು - ಓನರ್ ಕುತ್ತಿಗೆಗೆ ಕೈ ಹಾಕಿ ತಾಳಿ ಸರ ಕದ್ದು ಪರಾರಿಯಾದ್ರು
ತೀರ್ಥಹಳ್ಳಿಯ ಬಾರ್ಡರ್ ನಲ್ಲಿ ನಡೆದಿದ್ದಾದರೂ ಏನು..?
ತೀರ್ಥಹಳ್ಳಿ: ಚಹಾ ಕುಡಿಯುವ ನೆಪದಲ್ಲಿ ಬಂದ ಇಬ್ಬರು ಅಪಹರಣಕಾರರು ಹೋಟೆಲಿನ ಓನರ್ ಮಹಿಳೆಯ ಕುತ್ತಿಗೆಯಲ್ಲಿದ್ದ ಬಂಗಾರದ ತಾಳಿಸರವನ್ನು ಕದ್ದೊಯ್ದ ಘಟನೆ ಮಂಗಳವಾರ ಸೊನಲೆ ಗ್ರಾಮದಲ್ಲಿ ನಡೆದಿದೆ.
ಅರಳಸುರುಳಿ ಸಮೀಪದ ಸೊನಲೆ ಗ್ರಾಮದ ಹೋಟೆಲ್ ಒಂದರಲ್ಲಿ ಈ ಘಟನೆ ಜರುಗಿದ್ದು ಘಟನೆ ನಡೆದ ಕೆಲವೇ ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ. ಉಡುಪಿಯ 33 ವರ್ಷದ ತೌಸೀಫ್ ಹಾಗೂ ಮಂಗಳೂರಿನ 40 ವರ್ಷದ ರೋಶನ್ ಆರೋಪಿಗಳು. ಹೋಟೆಲ್ ಮಾಲಕಿ ಗಾಯತ್ರಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳ ಜಾಡನ್ನು ಹಿಡಿದ ಪೋಲೀಸರು ಮನೆಯೊಂದರ ಸಂಧಿಯಲ್ಲಿ ಅಡಗಿದ್ದ ಆರೋಪಿಗಳನ್ನು ಕಳ್ಳತನಕ್ಕೆ ಬಳಸಿದ್ದ ಒಂದು ಸ್ಕೂಟಿ ಸಹಿತ ವಶಕ್ಕೆ ಪಡೆದಿದ್ದಾರೆ .
ಆರೋಪಿಗಳು ಎಳೆದ ರಭಸಕ್ಕೆ 22 ಗ್ರಾಂ ಮಾಂಗಲ್ಯ ಸರ ತುಂಡಾಗಿದ್ದು 12 ಗ್ರಾಂ ಆರೋಪಿಗಳ ಕೈ ಸೇರಿದ್ದು 10 ಗ್ರಾಂ ಗಾಯತ್ರಿಯವರ ಬಳಿ ಉಳಿದಿತ್ತು ಎನ್ನಲಾಗಿದೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tags:
ಹೊಸನಗರ ಸುದ್ದಿ