15 ನೇ ಮೈಲಿಗಲ್ಲಿನ ಬಳಿ ಬುಲೆರೋ ವಾಹನ ಪಲ್ಟಿ, ಕೂಲಿ ಕಾರ್ಮಿಕರು ಪ್ರಾಣಾಪಾಯದಿಂದ ಪಾರು
ಶಿವಮೊಗ್ಗ : ಕಾಫಿ ತೋಟದಲ್ಲಿ ಕೆಲಸ ಮಾಡಲು ಬರುತ್ತಿದ್ದ ಕೂಲಿ ಕಾರ್ಮಿಕರು ಇದ್ದಂತಹ ಬುಲೆರೋ ವಾಹನವೊಂದು 15 ನೇ ಮೈಲಿಗಲ್ಲಿನ ಬಳಿ ಪಲ್ಟಿಯಾಗಿರುವ ಘಟನೆ ನಡೆದಿದೆ.
ಚಿಕ್ಕಮಗಳೂರಿನ ಕಳಸ ಭಾಗಕ್ಕೆ ಕೆಲಸಕ್ಕಾಗಿ ಕೂಲಿ ಕಾರ್ಮಿಕರನ್ನು ಕರೆತರಲಾಗುತ್ತಿತ್ತು. ಮಧ್ಯಪ್ರದೇಶದ ರಾಜಗಢ, ವಿದಿಶಾ ಹಾಗೂ ಗುನಾ ಜಿಲ್ಲೆಗಳಿಂದ ಒಟ್ಟು 29 ಮಂದಿ ಕೂಲಿ ಕಾರ್ಮಿಕರು, ಅವರಲ್ಲಿ ಇಬ್ಬರು ಮಕ್ಕಳು ಇದ್ದರು. ವಾಹನದಲ್ಲಿ ಎಲ್ಲರೂ ಪ್ರಯಾಣಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ.
ಅಪಘಾತದ ಪರಿಣಾಮ ವಾಹನದಲ್ಲಿದ್ದ ಕಾರ್ಮಿಕರಿಗೆ ಗಾಯಗಳಾಗಿದ್ದು, ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಪಘಾತಕ್ಕೆ ಚಾಲಕನ ಅಜಾಗರೂಕತೆ, ಅತಿವೇಗ ಅಥವಾ ವಾಹನದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಕರೆತರುತ್ತ ಇದ್ದಿದ್ದೇ ಕಾರಣವಾಯಿತೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Tags:
ಅಪಘಾತ ಸುದ್ದಿ