ಅಥ್ಲೇಟಿಕ್ಸ್ ಪಂದ್ಯಾವಳಿಯಲ್ಲಿ ಸಹ್ಯಾದ್ರಿ ಐಸಿಎಸ್ಇ ಶಾಲೆಯ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ -ರಾಜ್ಯಮಟ್ಟಕ್ಕೆ ಆಯ್ಕೆ
ತೀರ್ಥಹಳ್ಳಿ : ಶಿವಮೊಗ್ಗದ ನೆಹರು ಸ್ಟೇಡಿಯಂ ನಲ್ಲಿ ನಡೆದ CISCE Zone-H Athletics Tournament ನಲ್ಲಿ ಸಹ್ಯಾದ್ರಿ ಐಸಿಎಸ್ಇ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಹಲವು ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
17 ವರ್ಷದೊಳಗಿನ ಬಾಲಕರ ವಿಭಾಗ:
ದಲ್ಲಿ ಪೂರ್ಣಂ ತೇಜಸ್ 10ನೇ ತರಗತಿ, 1500 ಮೀ. ಓಟ ಪ್ರಥಮ ಹಾಗೂ 800 ಮೀ ಓಟ ದ್ವಿತೀಯ
ಸಮನ್ಯು ಎನ್ 10ನೇ ತರಗತಿ, ಡಿಸ್ಕಸ್ ಥ್ರೋ ದ್ವಿತೀಯ ಹಾಗೂ 200 ಮೀ ಓಟ ತೃತೀಯ
ಬಿ ಟಿ ಮಿಲನ್, 10ನೇ ತರಗತಿ, 5 ಕಿ.ಮೀ. ವಾಕ್ ರೇಸ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇನ್ನು 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ
ಐಶಿಕ ಕೆ ಆರ್, 10ನೇ ತರಗತಿ, 3 ಕಿ.ಮೀ ವಾಕ್ ರೇಸ್ ಪ್ರಥಮ ಹಾಗೂ 3000 ಮೀ ಓಟ ದ್ವಿತೀಯ ಸ್ಥಾನ ಪಡೆದರೆ
14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ
ಸಾನ್ವಿತ್ ಹೆಚ್ ಎಸ್, 8ನೇ ತರಗತಿ, ಶಾಟ್ಪುಟ್, ತೃತೀಯ
ರಿಷಿ ಸಿದ್ಧಾಂತ್ ಬಿ ಎನ್, 8ನೇ ತರಗತಿ, ಹೈಜಂಪ್, ತೃತೀಯ ಸ್ಥಾನ ಪಡೆದಿದ್ದಾರೆ..
ಈ ಎಲ್ಲಾ ವಿದ್ಯಾರ್ಥಿಗಳನ್ನು ಹಾಗೂ ದೈಹಿಕ ಶಿಕ್ಷಕರುಗಳನ್ನು ಶಾಲಾ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಶುಭ ಹಾರೈಸಿರುತ್ತಾರೆ.
Tags:
ಸಹ್ಯಾದ್ರಿ ಸಂಸ್ಥೆ