ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಕೊಡುವಂತಹದ್ದು ಬಹಳ ಮುಖ್ಯ - ಶಾಸಕ ಆರಗ ಜ್ಞಾನೇಂದ್ರ Araga jnanendra

ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಕೊಡುವಂತಹದ್ದು ಬಹಳ ಮುಖ್ಯ - ಶಾಸಕ ಆರಗ ಜ್ಞಾನೇಂದ್ರ 

ತೀರ್ಥಹಳ್ಳಿ : ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಕೊಡುವಂತಹದ್ದು ಬಹಳ ಮುಖ್ಯ ಹಾಗೆ ಅವರ ಮನನಸ್ಸನ್ನು ಒಲಿಸುವಂತಹದ್ದು ಕೂಡ ಬಹಳ ಮುಖ್ಯವಾಗುತ್ತದೆ. ಈಗಿನ ಮಕ್ಕಳು ತುಂಬಾ ಬುದ್ದಿವಂತರಾಗಿರುತ್ತಾರೆ ಹಾಗಾಗಿ ತುಂಬಾ ಕಷ್ಟ ಪಡುವ ಅಗತ್ಯವಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಮೇಗರವಳ್ಳಿ ಸರ್ಕಾರಿ ಶಾಲೆಯ ಎಲ್ ಕೆ ಜಿ ಹಾಗೂ ಯುಕೆಜಿ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ನಾವು ಓದುವಾಗ ಈ ವಯಸ್ಸಿನಲ್ಲಿ ಏನು ಮಾಡುತ್ತಿದ್ದೆವು ಎಂಬುದು ತಿಳಿದಿಲ್ಲ. ಅದರಲ್ಲೂ ಮನೆಗೆ ಯಾರಾದರೂ ಬಂದರೆ ಮೂಲೆ ಸೇರುತ್ತಿದ್ದೆವು. ನಾವು ಈ ವಯಸ್ಸಿಗೆ ಶಾಲೆಗೆ ಹೋಗಲ್ಲ ಎನ್ನುವುದು ಮನೆಯಲ್ಲಿ ಬಿಡಲ್ಲ ಎನ್ನುವುದು ಮನೆಯಲ್ಲೂ ಪೆಟ್ಟು, ಶಾಲೆಗೆ ಬಂದ ನಂತರ ಇಲ್ಲಿಯೂ ಪೆಟ್ಟು ಬೀಳುವುದು.. ಆದರೆ ಈಗಿನ ಮಕ್ಕಳು ಹಾಗಿಲ್ಲ ಕಲಿಕೆಯಲ್ಲಿ ಬಹಳ ವೇಗವಾಗಿ ಅರ್ಥ ಮಾಡಿಕೊಳ್ಳುತ್ತಾರೆ ಎಂದರು..

ಈಗ ಸರ್ಕಾರಿ ಶಾಲೆಗಳು ಮೇಲ್ದರ್ಜೆಗೆ ಏರುತ್ತಿವೆ. ಸರ್ಕಾರಿ ಶಾಲೆಗೆ ಕಳುಹಿಸಲು ಹಿಂದೆ ಮುಂದೆ ನೋಡುವ ಕಾಲ ಇತ್ತು. ಆದರೆ ಈಗ ಬದಲಾಗಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕೂಡ ಈಗ ರಾಜ್ಯಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. ಇಲ್ಲಿನ ಶಿಕ್ಷಣ ಕೂಡ ಬದಲಾಗಿದೆ. ಹಾಗಾಗಿ ಇಲ್ಲಿನ ವಿದ್ಯಾರ್ಥಿಗಳು ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು..

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥ್,    ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಕಾಂತ್ ಪಣತ ಸಂಪನ್ಮೂಲ ಅಧಿಕಾರಿಗಳಾದ ಸಾಧಿಕ್, ಮುಖ್ಯೋಪಾಧ್ಯಾಯರಾದ ಸುಮಾ ಎಚ್ ಎಮ್,  ಬಾಳೆಹಳ್ಳಿ ಪ್ರಭಾಕರ್ , ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ಶಿಲ್ಪ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರುಗಳು,  ಶಿಕ್ಷಕರು ಪೋಷಕ ವೃಂದದವರು  ಉಪಸ್ಥಿತರಿದ್ದರು.



Previous Post Next Post