ಜೆಸಿ ಆಸ್ಪತ್ರೆಯಲ್ಲಿ ಧೂಳು ಹಿಡಿದ ಸೋಲಾರ್ ಪೆನಾಲ್
ಸೂರ್ಯನ ಕಿರಣ ಬೀಳದಂತೆ ಶೀಟ್ ಮಾಡು ಹಾಕಿದ್ಯಾರು?
ಲಕ್ಷಾಂತರ ರೂ ಸರ್ಕಾರದ ಹಣ ಗುಳುಂ ಸ್ವಾಹಾ..!?
ತೀರ್ಥಹಳ್ಳಿ : ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿದ್ದೇನೆ ಎಂದು ಪ್ರತಿ ಬಾರಿ ಹೇಳುವಂತಹ ಶಾಸಕರು ಆಸ್ಪತ್ರೆಯ ಮೇಲ್ಚಾವಣಿ ಹತ್ತಿಲ್ಲವಾ? ಅಲ್ಲಿ ಧೂಳು ಹಿಡಿದು ಕುಳಿತಿರುವ ಸೋಲಾರ್ ಪೆನಲ್ ನೋಡಿಲ್ಲವೇ ? ಎಲ್ಲಾ ವಿಷಯ ಗೊತ್ತಿದ್ದರೂ ಗೊತ್ತಿಲ್ಲದಂತೆ ಮೌನ ವಹಿಸಿದ್ದಾರಾ? ಆರಗ ಜ್ಞಾನೇಂದ್ರ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ..
ಕಳೆದ ಎರಡು ವರ್ಷಗಳ ಹಿಂದೆ ಸರ್ಕಾರ ಅಂದಾಜು 10 ಲಕ್ಷ ರೂ ವೆಚ್ಚದಲ್ಲಿ ಸೋಲಾರ್ ವ್ಯವಸ್ಥೆ ಮಾಡಿದ್ದು ಇಲ್ಲಿಯವರೆಗೂ ಅದು ಉಪಯೋಗಿಸಿದಂತೆ ಕಾಣಿಸುತ್ತಿಲ್ಲ.. ಬಡ ರೋಗಿಗಳಿಗೆ ಅನುಕೂಲವಾಗುವಂತೆ ವಿದ್ಯುತ್ ಇಲ್ಲದೆ ಇರುವಾಗ ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಅನುಕೂಲವಾಗುವಂತೆ ಸೋಲಾರ್ ಅವಶ್ಯಕತೆ ಇದೆ ಎಂದು ಸರ್ಕಾರವೂ ಹಣ ನೀಡಿತ್ತು.. ಆದರೆ ತೀರ್ಥಹಳ್ಳಿ ಶಾಸಕರು ಸೇರಿದಂತೆ ಆಸ್ಪತ್ರೆ ಸಮಿತಿಯ ನಿರ್ಲಕ್ಷ್ಯದಿಂದಾಗಿ ಇಲ್ಲಿಯವರೆಗೂ ಸೋಲಾರ್ ವಿದ್ಯುತ್ ದೀಪ ಮಾತ್ರ ಕಂಡಿಲ್ಲ.. ಈ ರೀತಿ ಮೂಲೆಗುಂಪಾಗಿರುವ ಸೋಲಾರ್ ಪೆನಾಲ್ ಹಾಳಾಗಲು ಇದರ ಹಿಂದೆ ಯಾರ ಕೈವಾಡ ಇದೆ ಎಂಬುದಾಗಿ ಜಿಲ್ಲಾಧಿಕಾರಿಗಳು ತನಿಖೆ ನಡೆಸಬೇಕಿದೆ..
ಸೋಲಾರ್ ಪೆನಾಲ್ ಮೇಲ್ಭಾಗ ಶೀಟ್ ಮಾಡಲಾಗಿದೆ. ಶೀಟ್ ಮಾಡು ಹಾಕಲು ಮತ್ತೆ ಲಕ್ಷಾಂತರ ರೂ ವ್ಯರ್ಥ ಮಾಡಲಾಗಿದೆ. ಸುಮ್ಮನೆ ಹಣ ಖರ್ಚು ಮಾಡುವ ಬದಲಾಗಿ ಆಸ್ಪತ್ರೆಯ ಒಳಗೆ ಲ್ಯಾಬೋರೇಟರಿ, ರಕ್ತಪರೀಕ್ಷೆ, ಸ್ಕ್ಯಾನಿಂಗ್ ಸೆಂಟರ್ ಸರಿಪಡಿಸಬಹುದಿತ್ತು ಒಟ್ಟಿನಲ್ಲಿ ಸರ್ಕಾರದ ಹಣವನ್ನು ದುಂದುವೆಚ್ಚ ಮಾಡಲಾಗುತ್ತಿದೆ. ಜನಸಾಮಾನ್ಯರ ಕಷ್ಟಕ್ಕೆ ಬೇಕಾಗುವ ಕೆಲಸ ಮಾಡದೇ ತಮಗೆ ಅನುಕೂಲವಾಗುವಂತೆ ಏನಾದರು ಮಾಡಿಕೊಳ್ಳುತ್ತಿದ್ದಾರೆಯೇ?ಎಂದು ಸಾರ್ವಜನಿಕರು ಪ್ರೆಶ್ನೆ ಮಾಡುತ್ತಿದ್ದಾರೆ..
Tags:
ಜೆಸಿ ಆಸ್ಪತ್ರೆ