ಜು. 31 ಕ್ಕೆ ತೀರ್ಥಹಳ್ಳಿಯಲ್ಲಿ ಪತ್ರಿಕಾ ದಿನಾಚರಣೆ
ತೀರ್ಥಹಳ್ಳಿ : ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ತೀರ್ಥಹಳ್ಳಿ ತಾಲ್ಲೂಕು ಘಟಕದ ವತಿಯಿಂದ ಜುಲೈ 31 ರಂದು ಬೆಳಗ್ಗೆ 10 ಗಂಟೆಯಿಂದ ಮಾಧವ ಮಂಗಲ ಸಭಾ ಭವನದಲ್ಲಿ ಪತ್ರಿಕಾ ದಿನಾಚರಣೆ, ಅರಣ್ಯ ಸಂರಕ್ಷಣೆ ಕಾಯ್ದೆಗಳು ಮತ್ತು ರೈತರ ವಿಶೇಷ ಹಕ್ಕು ಕಂದಾಯ ಭೂಮಿಗಳ ಕಾನೂನುಗಳು ಹಾಗೂ ಮುಳುಗಡೆ ಯೋಜನೆಗಳ ಕುರಿತಾದ ವಿಚಾರ ಮಂಥನ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಹಿರಿಯ ರೈತ ಮುಖಂಡ ಕೋಡ್ಲು ವೆಂಕಟೇಶ್ ಉದ್ಘಾಟಿಸಲಿದ್ದಾರೆ. ಅರಣ್ಯ ಸಂರಕ್ಷಣೆ ಕುರಿತು ಹಿರಿಯ ರೈತ ಹೋರಾಟಗಾರ ಜಿ.ಎಸ್.ರಾಜೇಂದ್ರ ಅಸುರನಾಡು ಹಾಗೂ ಮುಳುಗಡೆ ಯೋಜನೆಗಳ ಕುರಿತು ಹಿರಿಯ ಪತ್ರಕರ್ತ ಪ್ರಭಾಕರ ಕಾರಂತ ವಿಷಯ ಮಂಡಿಸಲಿದ್ದಾರೆ.
ಇದಕ್ಕೆ ಸ್ಪಂದನೆಯಾಗಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ ಗೌಡ ಅಭಿಪ್ರಾಯಿಸಲಿದ್ದಾರೆ. ಪ್ರತಿ ಸ್ಪಂದನೆಯಾಗಿ ಜಿಲ್ಲಾಧಿಕಾರಿ ಪ್ರಭುಅಂಗ ಕಳವಟ್ಟಿ, ಶಿವಮೊಗ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಆರ್. ಅಜ್ಜಯ್ಯ ಮಾತನಾಡಲಿದ್ದಾರೆ. ಯುವ ಸ್ಪಂದನೆಯಾಗಿ ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ನವೀನ್ ಪೆದ್ದೂರು ಮತ್ತು ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಅದರ್ಶ ಹುಂಚದಕಟ್ಟೆ ಅಭಿಪ್ರಾಯ ಮಂಡಿಸಲಿದ್ದಾರೆ. ಚರ್ಚೆಯ ಸಮಗ್ರ ನಿರ್ವಹಣೆ ಪತ್ರಕರ್ತ ರಾಘವೇಂದ್ರ ಮೇಗರವಳ್ಳಿ ನಿರ್ವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ತೀರ್ಥಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಮೋಹನ್ ಮುನ್ನೂರುವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ , ತಹಶೀಲ್ದಾರ್ ಎಸ್.ರಂಜಿತ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ.ನಾಗರಾಜ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೈಲಾ ಎನ್, ನವಜೀವನ ಸಮಿತಿಯ ಮಾಜಿ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಯು.ವೈದ್ಯನಾಥ, ಪ್ರಧಾನ ಕಾರ್ಯದರ್ಶಿ ಹಾಲಸ್ವಾಮಿ, ರಂಜಿತ್, ರಾಜ್ಯ ನಿರ್ದೇಶಕ ಕೆ.ಬಿ.ಶಿವಕುಮಾರ್, ರಾಜ್ಯ ಚುನಾವಣಾಧಿಕಾರಿ ಟೆಲೆಕ್ಸ್ ರವಿಕುಮಾರ್, ಜಿಲ್ಲಾ ಪ್ರತಿನಿಧಿ ಕೆ.ರಮೇಶ್ ಶೆಟ್ಟಿ ಭಾಗವಹಿಸಲಿದ್ದಾರೆ.
Tags:
ತೀರ್ಥಹಳ್ಳಿ ಸುದ್ದಿ