ಹುಂಚದಕಟ್ಟೆಯ ಸೊಸೈಟಿಯಲ್ಲಿ ಲಕ್ಷಾಂತರ ರೂ ವ್ಯತ್ಯಾಸ..? - ತನಿಖೆ ನಡೆಸುವಂತೆ ಶೇರುದಾರರ ಆಗ್ರಹ..!!
ತೀರ್ಥಹಳ್ಳಿ : ಡಿಸಿಸಿ ಬ್ಯಾಂಕ್ ನ ವ್ಯಾಪ್ತಿಯೊಳಗೆ ಬರುವಂತಹ ಸೊಸೈಟಿಯೊಂದರಲ್ಲಿ ಲಕ್ಷಾಂತರ ರೂಗಳ ವ್ಯತ್ಯಾಸ ಕಂಡುಬಂದಿದ್ದು ಸೂಕ್ತ ತನಿಖೆ ನಡೆಸುವಂತೆ ಷೇರುದಾರರು ಆಗ್ರಹ ವ್ಯಕ್ತಪಡಿಸಿದ್ದಾರೆ. ಮಾಹಿತಿ ಕೇಳಿದರೆ ಜನರಲ್ ಬಾಡಿ ಮೀಟಿಂಗ್ ನಲ್ಲಿ ಕೇಳಿಕೊಳ್ಳಿ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ಇವರನ್ನು ನಂಬಿ ನಾವು ಹಣ ಇಟ್ಟಿರುತ್ತೇವೆ. ಹಾಗಾಗಿ ಸರಿಯಾದ ತನಿಖೆ ನಡೆಯಬೇಕು ಎಂದು ಷೇರುದಾರರು ಆಗ್ರಹಿಸಿದ್ದಾರೆ.
ಹಣದಲ್ಲಿ ವ್ಯತ್ಯಾಸ ಕಂಡು ಬಂದಿದ್ದ ಹಿನ್ನಲೆಯಲ್ಲಿ ಈಗಾಗಲೇ ಅವರೇ ಒಂದು ಮೀಟಿಂಗ್ ಮಾಡಿ ಸರಿಪಡಿಸಿಕೊಳ್ಳೋಣ ಯಾವುದೇ ಕಾರಣಕ್ಕೂ ಯಾರಿಗೂ ತಿಳಿಯಬಾರದು ಎಂದು ಸಭೆ ಮಾಡಿದ್ದಾರೆ. ಆದರೆ ಅದು ಹೇಗೋ ಷೇರುದಾರರಿಗೆ ವಿಷಯ ತಿಳಿದಿದೆ. ಪ್ರೆಶ್ನೆ ಮಾಡಿದರೆ ಉಡಾಫೆ ಉತ್ತರ ನೀಡುತ್ತಾರೆ.. ನಮಗೆ ಲಕ್ಷಾಂತರ ರೂ ಹಣ ವ್ಯತ್ಯಾಸ ಎಂಬುದಾಗಿ ತಿಳಿದು ಬಂದಿದೆ. ಹಾಗಾಗಿ ಸಮಗ್ರ ತನಿಖೆ ನಡೆಯಬೇಕು ಎಂದು ಷೇರುದಾರರು ಆಗ್ರಹಿಸಿದ್ದಾರೆ..
Tags:
ತೀರ್ಥಹಳ್ಳಿ ಸುದ್ದಿ