ನದಿಯಲ್ಲಿ ತೇಲಿ ಹೋಗಿದ್ದ ವೃದ್ಧನ ಶ*ವ ಪತ್ತೆ..!
ತೀರ್ಥಹಳ್ಳಿ : ಆರಿದ್ರ ಮಳೆಯ ಅಬ್ಬರಕ್ಕೆ ಆಗುಂಬೆ ವ್ಯಾಪ್ತಿಯ ಅರೇಹಳ್ಳಿ ಗ್ರಾಮಪಂಚಾಯಿತಿಯ ಕೇಳೂರು ಗ್ರಾಮದ ವೃದ್ಧರೊಬ್ಬರು ನದಿಯಲ್ಲಿ ತೇಲಿಕೊಂಡು ಹೋಗಿದ್ದರು. ಎಷ್ಟೇ ಹುಡುಕಾಟ ನಡೆಸಿದರು ಪತ್ತೆಯಾಗಿರಲಿಲ್ಲ.. ಹದಿನೈದು ದಿನದ ನಂತರ ನದಿಯಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ..
ರಾಮಪ್ಪ (62 ವರ್ಷ ) ಮೃತಪಟ್ಟ ವೃದ್ಧ.. ತೋಟಕ್ಕೆಂದು ಹೋಗಿದ್ದಾಗ ಈ ಅವಘಡ ಸಂಭವಿಸಿತ್ತು.. ನದಿ ಸಮೀಪದಲ್ಲಿ ಚಪ್ಪಲಿ ಹಾಗೂ ಬಟ್ಟೆ ಸಿಕ್ಕಿತ್ತು. ಹಾಗಾಗಿ ನದಿಯಲ್ಲಿ ತೇಲಿಕೊಂಡು ಹೋಗಿರುವ ಸಾಧ್ಯತೆ ಇರಬಹುದು ಎಂದು ಅಗ್ನಿಶಾಮಕದಳ ಹಾಗೂ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು ..
ಆದರೆ ಆಗ ಬಾರಿ ಗಾಳಿ - ಮಳೆ ಇದ್ದ ಕಾರಣ ಕಾರ್ಯಾಚರಣೆಗೆ ಅಡಚಣೆ ಉಂಟಾಗಿತ್ತು.. ಆ ನಂತರ ಹುಡುಕಾಟ ಸ್ಥಗಿತ ಮಾಡಲಾಗಿತ್ತು.
ಸುಮಾರು ಹದಿನೈದು ದಿನದ ನಂತರ ನದಿಯಲ್ಲಿ ಮೃತದೇಹ ತೆಲುತ್ತಿದ್ದು ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನದಿಯಿಂದ ಮೃತದೇಹ ಹೊರತೆಗೆಯಲಾಗಿದೆ..
ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿತ್ತು..
Tags:
ಆಗುಂಬೆ ಸುದ್ದಿ