ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಳೆಮಾಪಕ ಸರಿಪಡಿಸಲು ಆರಗ ಜ್ಞಾನೇಂದ್ರ ಮನವಿ Araga jnanendra

ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಳೆಮಾಪಕ ಸರಿಪಡಿಸಲು ಆರಗ ಜ್ಞಾನೇಂದ್ರ ಮನವಿ

ತೀರ್ಥಹಳ್ಳಿ : ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ನಂತರ ರೈತರಿಗೆ ವಿಶೇಷವಾಗಿ ಹವಾಮಾನ ಆಧಾರಿತ ಇನ್ಸೂರೆನ್ಸ್ ಮಾಡಿ ಸಹಾಯ ಮಾಡಿಕೊಟ್ಟಿದೆ. ಅತಿವೃಷ್ಟಿ ಅಥವಾ ಅನಾವೃಷ್ಟಿ ಯಾವುದೇ ಆದರೂ ರೈತರಿಗೆ ಬೆಳೆ ವಿಮೆ ಸಿಗುತ್ತದೆ.. ಆದರೆ ಕಳೆದ ಎರಡು ವರ್ಷಗಳಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಳೆಮಾಪಕ ಹಾಳಾಗಿದ್ದು ಇದರಿಂದ ರೈತರಿಗೆ ತೊಂದರೆಯಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಮಾಧ್ಯಮಗಳಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು  ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವಂತಹ ಮಳೆ ಮಾಪಕ ಸರಿಯಾಗಿ ಇಲ್ಲದೇ ಇರುವುದರಿಂದ ಕಳೆದ ಬಾರಿ ರೈತರಿಗೆ ಬೆಳೆ ವಿಮೆ ಸಿಕ್ಕಿಲ್ಲ.. ಇದರಿಂದ ಬಹಳ ಜನ ರೈತರಿಗೆ ತೊಂದರೆಯಾಗಿದೆ. ಕಳೆದ ಎರಡು ವರ್ಷಗಳಿಂದ ಈ ವಿಚಾರವಾಗಿ ನಾನು ಹೋರಾಟ ಮಾಡುತ್ತಿದ್ದೇನೆ.. ರಾಜ್ಯ ಸರ್ಕಾರ ಮಳೆಮಾಪಕವನ್ನ ದುರಸ್ತಿ ಮಾಡಲು ಆಗಿಲ್ಲ ರೈತರ ಬಗ್ಗೆ ಗಮನ ವಹಿಸಲು ಸರ್ಕಾರಕ್ಕೆ ಪುರ್ಸೊತ್ತು  ಇಲ್ಲ ಎಂದರು..

ಕಂದಾಯ ಇಲಾಖೆಯ ವಿಪತ್ತು ಕಾರ್ಯದರ್ಶಿ ಮನೋಜ್ ಕುಮಾರ್ ಅವರನ್ನು ಹಾಗೆಯೇ ತೋಟಗಾರಿಕಾ ಇಲಾಖೆಯ ಕಾರ್ಯದರ್ಶಿ ಕ್ಯಾ.ರಾಜೇಂದ್ರ ಅವರನ್ನು ಭೇಟಿಯಾಗಿ ಈಗಾಗಲೇ ಅರ್ಧ ಮಳೆಗಾಲ ಕಳೆದು ಹೋಗಿದೆ. ಉಳಿದಿರುವ ಅವಧಿಯ ಒಳಗಾಗಿ ಕೂಡಲೇ ಮಳೆ ಮಾಪಕ ಕೇಂದ್ರವನ್ನ ಸರಿಪಡಿಸಬೇಕು ಎಂದು ತಿಳಿಸಿದ್ದೇನೆ. ಅವರು ಕೂಡ ಈ ತಿಂಗಳ ಒಳಗಾಗಿ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು..

Previous Post Next Post