ಕೆಪಿಎಸ್ ಹೊನ್ನೇತಾಳು ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಭೇಟಿ
ತೀರ್ಥಹಳ್ಳಿ : ರಾಜ್ಯಮಟ್ಟದಲ್ಲಿ ಹೆಸರು ಮಾಡಿರುವ ಆಗುಂಬೆ ಹೋಬಳಿಯ ಹೊನ್ನೇತಾಳು ಗ್ರಾಮಪಂಚಾಯಿತಿ ವ್ಯಾಪ್ತಿಯ ಕೆಪಿಎಸ್ ಹೊನ್ನೇತಾಳು ಸರ್ಕಾರಿ ಶಾಲೆಗೆ ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥ್ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆಪಿಎಸ್ ಶಾಲೆ ಬಗ್ಗೆ ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಮೆಚ್ಚುಗೆ ವ್ಯಕ್ತಪಡಿಸಿರುವ ಬೆನ್ನಲ್ಲೇ ಪ್ರತಿಯೊಬ್ಬ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ.. ಕಳೆದ ವಾರ ತಾಲೂಕು ತಹಸೀಲ್ದಾರ್ ರಂಜಿತ್ ಭೇಟಿ ನೀಡಿ ಮಕ್ಕಳ ಜೊತೆಗೆ ಮಾತನಾಡಿ ಆ ನಂತರ ಶಾಲೆಯಲ್ಲೇ ಬಿಸಿಯೂಟ ಸೇವಿಸಿ ಶಾಲೆಗೆ ಬೇಕಾದ ಕೆಲಸಗಳನ್ನು ಮಾಡಿ ಕೊಡುವುದಾಗಿ ಭರವಸೆ ನೀಡಿದ್ದರು. ಈಗ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥ್ ಭೇಟಿ ನೀಡಿದ್ದಾರೆ..
ಕೆಪಿಎಸ್ ಹೊನ್ನೇತಾಳು ಶಾಲೆಗೆ ದಿಡೀರ್ ಭೇಟಿ ನೀಡಿ ಶಾಲೆಯ ಒಟ್ಟಾರೆ ವಾತಾವರಣವನ್ನು ಸೂಕ್ಷವಾಗಿ ಗಮನಿಸಿದರು. ಪ್ರತಿಯೊಂದು ತರಗತಿ ಕೊಠಡಿಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಕಲಿಕ ಮತ್ತು ಶಿಕ್ಷಕರ ಬೋಧನಾ ಕ್ರಮವನ್ನು ವೀಕ್ಷಿಸಿದರು.. ವಿಶೇಷವಾಗಿ ಶಾಲೆಯಲ್ಲಿ ಇರುವ ಡಿಜಿಟಲ್ ಬೋಧನೆಯನ್ನ ಪ್ರಶಂಸಿದರು..ಮಧ್ಯಾಹ್ನದ ಬಿಸಿಯೂಟದ ಸ್ವಚ್ಛತೆ, ಕುಡಿಯುವ ನೀರು ಮತ್ತು ಶೌಚಾಲಯಗಳ ವ್ಯವಸ್ಥೆಯನ್ನು ಖುದ್ದಾಗಿ ವೀಕ್ಷಿಸಿ ನಂತರ ತಾವು ಶಾಲೆಯಲ್ಲೇ ಬಿಸಿಯೂಟ ಸೇವಿಸಿ ಶಾಲೆಯ ಅಭಿವೃದ್ಧಿ ಹಾಗೂ ಎಸ್ ಡಿಎಂಸಿಯವರ ಕಾರ್ಯಾಚಟುವಟಿಕೆ ಮತ್ತು ಶಿಕ್ಷಕರ ಕೆಲಸವನ್ನು ಹಾಡಿ ಹೊಗಳಿದರು..
Tags:
ಆಗುಂಬೆ ಸುದ್ದಿ