ವಿಕಲ ಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ಹಸ್ತಾಂತರ
ತೀರ್ಥಹಳ್ಳಿ : ಇವತ್ತು ನಮ್ಮ ಕ್ಷೇತ್ರದ ವಿಕಲ ಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ನೀಡುತ್ತಿದ್ದೇವೆ. ಸುಮಾರು 12 ಮಂದಿಗೆ ಈ ಬಾರಿ ವಾಹನ ನೀಡಲಾಗುತ್ತಿದೆ. ಅವರಿಗೆ ಆತ್ಮವಿಶ್ವಾಸ ನೀಡುವ ಸಲುವಾಗಿ ಇದನ್ನು ನೀಡಲಾಗುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು..
ಗ್ರಾಮೀಣಾಭಿವೃದ್ಧಿ ಭವನದಲ್ಲಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ಹಸ್ತಾಂತರ ಮಾಡಿ ಮಾತನಾಡಿದ ಅವರು ನಮ್ಮ ಕೈಯಲ್ಲಿ ಏನು ಆಗುವುದಿಲ್ಲ ಎಂಬ ಕೊರಗು ಇರಬಾರದು ಎಂಬ ಕಾರಣದಿಂದ ಈ ವಾಹನ ನೀಡುತ್ತಿದ್ದೇವೆ. ಅವರಿಗೆ ಆತ್ಮ ವಿಶ್ವಾಸ ಹೊರ ತರುವ ಸಲುವಾಗಿ ಈ ವಾಹನ ನೀಡುತ್ತಿದ್ದೇವೆ. ತಾಲೂಕು ಪಂಚಾಯತ್ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ವಾಹನ ನೀಡಲಾಗುತ್ತಿದೆ. ಒಂದು ವಾಹನಕ್ಕೆ ಲಕ್ಷದ 10 ಸಾವಿರ ರೂ ಹಣ
ಖರ್ಚಾಗುತ್ತದೆ.. ಇದನ್ನು ಇಂದು ಹಸ್ತಾಂತರ ಮಾಡಿದ್ದೇವೆ. ಬೇರೆಯವರಿಗೆ ಯಾವುದೇ ಕಾರಣಕ್ಕೂ ವಾಹನ ಕೊಡಬಾರದು ಹಾಗೇನಾದ್ರೂ ಕೊಟ್ಟರೆ ಕೇಸ್ ದಾಖಲಾಗುತ್ತದೆ ಎಂದರು.
Tags:
ತೀರ್ಥಹಳ್ಳಿ ಸುದ್ದಿ