ತೀರ್ಥಹಳ್ಳಿಯ ಶಾಸಕರು ತಮ್ಮ ಮಗನಿಗೆ ಒಂದು ಧಾರ್ಮಿಕ ಜಾಗವನ್ನ ರಿಜಿಸ್ಟರ್ ಮಾಡಿರುವುದನ್ನು ನೈತಿಕವಾಗಿ ವಿರೋಧಿಸುತ್ತೇವೆ - ಆದರ್ಶ ಹುಂಚದಕಟ್ಟೆ
ತೀರ್ಥಹಳ್ಳಿ : ಯಾವುದೇ ಕಾರ್ಯಕ್ರಮಗಳಿಗೆ ಹೋದರು ಕೂಡ ಶಾಸಕರು ತಮ್ಮ ಮಾತುಗಳನ್ನು ಕೇವಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಲು ಬಳಸುತ್ತಾರೆ. ಆ ಕಾರ್ಯಕ್ರಮದ ಉದ್ದೇಶವನ್ನು ಹಾಳು ಮಾಡುತ್ತಿದ್ದಾರೆ. ಇತ್ತೀಚೆಗೆ ಜೋಪಡಿ ನಿವಾಸಿಗಳಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಹಕ್ಕು ಪತ್ರ ದೊರಕಿಸಲು ಈ ಹಿಂದೆ ಯಾರಲ್ಲ ಹೋರಾಟ ಮಾಡಿದ್ದಾರೆ ಎಂಬುದನ್ನು ಗಮನಿಸಿದರೆ ಅವರು ಈ ರೀತಿ ಮಾತನಾಡುತ್ತಿರಲಿಲ್ಲ. ಕಿಮ್ಮನೆ ರತ್ನಾಕರ್ ರವರು ಶಾಸಕರಾಗಿದ್ದಾಗ ಇವರಿಗೆ ಹಕ್ಕು ಪತ್ರ ಕೊಡಲು ಪ್ರಯತ್ನ ಮಾಡಿದ್ದರು.. ಜಿಲ್ಲಾ ಉಸ್ತುವಾರಿಗಳಾಗಿದ್ದ ಮಧು ಬಂಗಾರಪ್ಪ ವಸತಿ ಸಚಿವರಾಗಿದ್ದ ಜಮೀರ್ ಅಹ್ಮದ್ ರವರ ಪ್ರಯತ್ನದ ಫಲವಾಗಿ ಇವತ್ತು ಹಕ್ಕುಪತ್ರ ದೊರೆತಿದೆ.ಶಾಸಕರಾದ ಆರಗ ಜ್ಞಾನೇಂದ್ರ ರವರು ನೀಡುತ್ತಿರುವ ಹೇಳಿಕೆಗಳು ತೀರ್ಥಹಳ್ಳಿಗೆ ಶೋಭೆ ತರುವಂತದ್ದಲ್ಲ ಎಂದು ಯುವ ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ ತಿಳಿಸಿದರು..
ಸೋಮವಾರ ತೀರ್ಥಹಳ್ಳಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ತೀರ್ಥಹಳ್ಳಿಯಲ್ಲಿ ಒಂದಿಷ್ಟು ರಾಜಕೀಯ ಹೇಳಿಕೆಗಳು ಬರುತ್ತಿವೆ. ಶಾಸಕರು ಒಂದು ರೀತಿಯ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸ್ವಾತಂತ್ರ ಬಂದು ಇಷ್ಟು ವರ್ಷಗಳಾದರೂ ಹಕ್ಕು ಪತ್ರ ಕೊಡಲಾಗಿಲ್ಲ ಎಂಬ ಪದ ಬಳಸುತ್ತಾರೆ. ಆದರೆ ಈ ಹಕ್ಕು ಪತ್ರಗಳನ್ನು ಕೊಡಲು ಯಾರೂ ಕಾರಣಕರ್ತರು ಎಂದು ಗೊತ್ತಾಗಿದ್ದರೆ ಈ ಮಾತುಗಳನ್ನು ಆಡುತ್ತಿರಲಿಲ್ಲ. ಇನ್ನೂ ಹಲವರು ಇವರ ಪಕ್ಷಕ್ಕೆ ಬೆಂಬಲ ನೀಡುತ್ತಿರುವವರು ನಿರಾಶ್ರಿತರು ಇದ್ದಾರೆ ಅವರಿಗೆ ಹಕ್ಕು ಪತ್ರ ಕೊಡಿಸುವ ಕೆಲಸ ಯಾಕೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು
ಇತ್ತೀಚೆಗೆ ನಡೆದ ಬಾಣಂತಿ ಸಾವಿನ ವಿಷಯದಲ್ಲಿ ನಮಗೂ ನೋವಿದೆ ಯಾರಿಗೂ ಈ ರೀತಿ ಆಗಬಾರದು.. ಆದರೆ ಒಂದು ತಾಲೂಕು ಆಸ್ಪತ್ರೆ ಎಂದರೆ ಯಾವ ರೀತಿಯ ಫೆಸಿಲಿಟೀಸ್ ಇರಬೇಕು ಎಂದು ಶಾಸಕರಿಗೆ ಗೊತ್ತಿರಬೇಕು.. ಇವರು ಗೃಹ ಮಂತ್ರಿಯಾಗಿ ಕೆಲಸ ನಿರ್ವಹಿಸಿದವರು ಇವರಿಗೆ ಎಲ್ಲಾ ವಿಧದ ಇಲಾಖೆಗಳ ಅರಿವು ಇರುತ್ತದೆ. ಆಗ ಇವರಿಗೆ ಜೆಸಿ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವ ಅವಕಾಶ ಇರಲಿಲ್ಲವೇ..? ಇವತ್ತಿನ ಪರಿಸ್ಥಿತಿ ಜೆಸಿ ಆಸ್ಪತ್ರೆಯಲ್ಲಿ ಹೇಗಿದೆ ಎಂದು ಇವರು ಪರಿಶೀಲನೆ ಮಾಡಿದ್ದಾರೆಯೇ?? ತಾಯಿ ಮತ್ತು ಮಗುವಿನ ಆಸ್ಪತ್ರೆಗಾಗಿ ಮನವಿ ಸಲ್ಲಿಸಿದ್ದು ಬಿಟ್ಟರೆ ಬೇರೇನೂ ಶಾಸಕರು ಮಾಡಲಿಲ್ಲ ಎಂದರು..
ಇವರ ಪಕ್ಷದವರೊಬ್ಬರು ಚುನಾವಣೆಗೆ ನಿಲ್ಲದವರು ಕೆಪಿಸಿಸಿ ಅಧ್ಯಕ್ಷರು ಹೇಗೆ ಆಗುತ್ತಾರೆ ಎಂದು ಪ್ರೆಶ್ನೆ ಮಾಡುತ್ತಾರೆ..
ಒಮ್ಮೆ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತು ಠೇವಣಿ ಕಳೆದುಕೊಂಡಿರುವವರು ತಾಲೂಕಿನ ಬಿಜೆಪಿ ಅಧ್ಯಕ್ಷರಾಗುವುದಾದರೆ ಎಂ ಎಲ್ ಸಿ ಹಾಗೂ ರಾಜ್ಯಸಭೆ ಸದಸ್ಯರಾಗಿರುವವರು ಕೆಪಿಸಿಸಿ ಅಧ್ಯಕ್ಷರಾಗಬಹುದಲ್ಲವೇ..
ನರೇಂದ್ರ ಮೋದಿಯವರು ಮುಖ್ಯಮಂತ್ರಿ ಆಗುವ ಮೊದಲು ಯಾವ ಚುನಾವಣೆಗೆ ನಿಂತಿದ್ದರು? ಎಲ್ ಕೆ ಅಡ್ವಾಣಿ ರವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದವರು ಯಾವ ಚುನಾವಣೆಗೆ ನಿಂತಿದ್ದರು..ನಿರ್ಮಲ ಸೀತಾರಾಮನ್ ರವರು ಹಣಕಾಸು ಸಚಿವರು ಆಗಿರುವವರು ಯಾವ ಚುನಾವಣೆಯಿಂದ ಗೆದ್ದಿದ್ದು? ಎಂದು ಪ್ರೆಶ್ನೆ ಮಾಡಿದರು..
ಇತ್ತೀಚಿಗೆ ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷರಾದ ಹೆದ್ದೂರು ನವೀನ್ ರವರು ಚರ್ಚೆಗೆ ಬನ್ನಿ ಎಂದು ಚಾಲೆಂಜ್ ಹಾಕಿದ್ದಾರೆ..ಅಭಿವೃದ್ಧಿ ಕಾರ್ಯದ ವಿಷಯದಲ್ಲಿ ನಾವು ರೆಡಿ ಇದ್ದೇವೆ.. ಇವರು ಎಷ್ಟು ಹಕ್ಕಪತ್ರಗಳನ್ನು ಕೊಟ್ಟಿದ್ದಾರೆ. ಕಿಮ್ಮನೆ ಅವರು ಎಷ್ಟು ಕೊಟ್ಟಿದ್ದಾರೆ ಎಂಬುದಾಗಿ ಚರ್ಚೆಗೆ ಬನ್ನಿ 10 ವರ್ಷದಲ್ಲಿ ಕಿಮ್ಮನೆ ರವರು ಎಷ್ಟು ಮನೆಗಳನ್ನು ಕೊಟ್ಟಿದ್ದಾರೆ. ಕಿಮ್ಮನೆ ರವರ ಕಾಲದಲ್ಲಿ ಆದ ರಸ್ತೆಗಳು ಎಷ್ಟು ಗುಣಮಟ್ಟದಲ್ಲಿವೆ ನಿಮ್ಮ ಕಾಲದಲ್ಲಿ ಆದ ರಸ್ತೆಗಳು ಎಷ್ಟು ಗುಣಮಟ್ಟದಲ್ಲಿವೆ.. ಎಂಬುದಾಗಿ ಚರ್ಚೆ ಮಾಡೋಣ.. ನಿಮ್ಮ ಸವಾಲಿಗೆ ನಾವು ಸದಾ ಸಿದ್ಧ ಎಂದರು..
ಇಂದಿರಾ ಕ್ಯಾಂಟೀನ್ ಕಾಂಗ್ರೆಸ್ಸಿನ ಫ್ರಾಡ್ ಸ್ಕೀಮ್ ಎಂದು ಆರಗ ಜ್ಞಾನೇಂದ್ರರವರು ಹೇಳುತ್ತಾರೆ.. ಇಂದಿರಾ ಕ್ಯಾಂಟೀನ್ ಕಟ್ಟಡ ಕಂಟ್ರಾಕ್ಟರ್ ತಪ್ಪಿನಿಂದ ಸೋರುತ್ತಿದ್ದರೆ ಈ ಸ್ಕೀಮ್ ಫ್ರಾಡ್ ಹೇಗೆ ಆಗುತ್ತದೆ.. ಗ್ರಾಮೀಣಾಭಿವೃದ್ಧಿ ಭವನ , ಅಗ್ನಿಶಾಮಕ ಠಾಣೆ ಪೋಲಿಸ್ ವಸತಿಗೃಹಗಳು, ಸೋರುತ್ತಿವೆ ಎಂದು ಎಲ್ಲಾ ಪತ್ರಿಕೆಗಳಲ್ಲಿ ಬಂದಿದ್ದವು.. ಹಾಗಿದ್ದರೆ ಅವುಗಳೆಲ್ಲ ಫ್ರಾಡ್ ಸ್ಕೀಮ್ ಗಳೇ..? ಕೇವಲ ದ್ವೇಷವನ್ನೇ ಬಿತ್ತಿ ದ್ವೇಷದ ಭಾಷಣ ಮಾಡಿದರೆ ತೀರ್ಥಹಳ್ಳಿಗೆ ಯಾವುದೇ ಫಲ ಸಿಗುವುದಿಲ್ಲ..ಶಾಸಕರು ತಮ್ಮ 40 ವರ್ಷದ ರಾಜಕಾರಣದಲ್ಲಿ ನೆನಪಿಟ್ಟುಕೊಳ್ಳುವ ಯಾವುದಾದರೂ ಒಂದು ಕೆಲಸ ತೀರ್ಥಹಳ್ಳಿ ಕ್ಷೇತ್ರಕ್ಕೆ ಮಾಡಿದ್ದಾರೆಯೇ..? ಕೇವಲ ಕಾಂಗ್ರೆಸ್ಸನ್ನು ದೋಷಿಸುವುದು ಇವರ ಕೆಲಸ ಆಗಿದೆ ಎಂದರು..
ತೀರ್ಥಹಳ್ಳಿಯ ಶಾಸಕರು ತಮ್ಮ ಮಗನಿಗೆ ಒಂದು ಧಾರ್ಮಿಕ ಜಾಗವನ್ನ ರಿಜಿಸ್ಟರ್ ಮಾಡಿರುವುದನ್ನು ನೈತಿಕವಾಗಿ ವಿರೋಧಿಸುತ್ತೇವೆ .. ಈ ವಿಚಾರದಲ್ಲಿ ನಾವು ಸರ್ಕಾರಕ್ಕೆ ತನಿಖೆ ನಡೆಸಲು ಆಗ್ರಹಿಸುತ್ತೇವೆ.. ಒಂದು ಧಾರ್ಮಿಕ ಕೇಂದ್ರದ ಜಾಗವನ್ನು ಇವರು ತೆಗೆದುಕೊಂಡಿರಬಹುದು ಆದರೆ ಅದನ್ನು ಧಾರ್ಮಿಕ ಬಳಕೆಗೆ ಬಳಸಬೇಕು.. ರಾಮೇಶ್ವರ ದೇವಸ್ಥಾನದ ಜಾಗ ಲೀಗಲ್ ಅಲ್ಲಿ ಸಿಗುತ್ತದೆ ಎಂದಾದರೆ ಶಾಸಕರು ಬಿಜೆಪಿ ಅಧ್ಯಕ್ಷರು ರಿಜಿಸ್ಟರ್ ಮಾಡಿಕೊಳ್ಳುತ್ತಾರೆಯೇ? ಬಿಂತ್ಲಾದ ಆ ಜಾಗದಲ್ಲಿ ಅವರು ದೇವಸ್ಥಾನವನ್ನೆ ಕಟ್ಟಿದರೆ ನಾವು ಸಹ ಚಂದವನ್ನು ಎತ್ತಿ ಸಹಕರಿಸುತ್ತೇವೆ ಎಂದರು..
ಈ ಸಂದರ್ಭದಲ್ಲಿ ಅಮರ್ ನಾಥ್ ಶೆಟ್ಟಿ, ಶ್ರೇಯಸ್ ರಾವ್, ಪೂರ್ಣೇಶ್ ಕೆಳಕೆರೆ ಇದ್ದರು.
Tags:
ಕಾಂಗ್ರೆಸ್ ಸುದ್ದಿ