ವಾಗ್ದೇವಿ ಶಾಲೆಯ ಸಾನ್ವಿ ಜೋಯ್ಸ್ ರಾಷ್ಟ್ರಮಟ್ಟಕ್ಕೆ ಆಯ್ಕೆ
ತೀರ್ಥಹಳ್ಳಿ : ಜು 6 ಹಾಗೂ 7 ರಂದು ಯಲ್ಲಾಪುರದಲ್ಲಿ ನಡೆದ ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ರವರು ನಡೆಸಿದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿ ಸಾನ್ವಿ ಜೋಯ್ಸ್ ಭಾಗವಹಿಸಿ,
ಅತ್ಯುತ್ತಮವಾಗಿ ಯೋಗವನ್ನು ಪ್ರದರ್ಶಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ..
ಸೊಪ್ಪುಗುಡ್ಡೆಯ ಅರ್ಚನಾ ಹಾಗೂ ಮಹಾಬಲ ಜೋಯ್ಸ್
ದಂಪತಿಗಳ ಪುತ್ರಿಯಾಗಿದ್ದು, ಶಾಲೆಗೆ, ತಾಲ್ಲೂಕಿಗೆ, ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾಳೆ. ಇವಳ ಈ ಸಾಧನೆಯನ್ನು ವಾಗ್ದೇವಿ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಶಿಕ್ಷಕವೃಂದ ಹಾಗೂ ಪೋಷಕರು ಅಭಿನಂದಿಸಿ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕವನ್ನು ಪಡೆದುಕೊಳ್ಳಲಿ ಎಂದು ಶುಭಹಾರೈಸಿದ್ದಾರೆ .
Tags:
ವಾಗ್ದೇವಿ ಸಂಸ್ಥೆ