ಚುನಾವಣೆ ಲಾಭಕ್ಕಾಗಿ ಬಿಜೆಪಿ ಎಸ್ ಐ ಆರ್ ಪ್ರಕ್ರಿಯೆ ನಡೆಸುತ್ತಿದೆ - ಕಿಮ್ಮನೆ ರತ್ನಾಕರ್ Kimmane Ratnakar

ಚುನಾವಣೆ ಲಾಭಕ್ಕಾಗಿ ಬಿಜೆಪಿ ಎಸ್ ಐ ಆರ್  ಪ್ರಕ್ರಿಯೆ ನಡೆಸುತ್ತಿದೆ - ಕಿಮ್ಮನೆ ರತ್ನಾಕರ್ 

ತೀರ್ಥಹಳ್ಳಿ : ಎಸ್ ಐ ಆರ್ ಎಂಬ ವಿಚಾರ ಪ್ರತಿಯೊಬ್ಬರಿಗೂ ತಲುಪಬೇಕು ಹಾಗಾಗಿ ನಾವು ಸಭೆ ನಡೆಸುತ್ತೇವೆ.. 1947 ರಲ್ಲಿ ಸ್ವಾತಂತ್ರ್ಯ ಬಂತು, ಈ ದೇಶದಲ್ಲಿ ಹುಟ್ಟಿದವರು, ಯಾರೆಲ್ಲ ಇದ್ದರೋ ಅವರೆಲ್ಲ ಈ ದೇಶದ ಮತದಾರ ಆಗಬೇಕು ಎಂಬುದು ಇತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಈಗ ಮತದಾರ ಪಟ್ಟಿಯಲ್ಲಿ ಹೆಸರು ಇಲ್ಲದಂತೆ ಆಗಿದೆ. ಅಧಿಕಾರಿಗಳು ಮನೆಗೆ ಬಂದಾಗ ಅಥವಾ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಆಗಸ್ಟ್ 5 ರ ಒಳಗೆ ಸಲ್ಲಿಸದಿದ್ದರೆ ನೀವು ಈ ದೇಶದ ಮತದಾರ ಆಗಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ವಿಫಲ ಆಗಿದೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು..

ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಎಸ್ ಐ ಆರ್ ಪ್ರಕ್ರಿಯೆಗೆ ಆತುರ ಯಾಕೆ? ಎಷ್ಟೋ ಜನರಿಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಗೊತ್ತಿಲ್ಲ. ಚುನಾವಣೆ ನಂತರ ಮಾಡಬಹುದು, ಎರಡೇ ತಿಂಗಳಲ್ಲಿ ಅರ್ಜಿ ಸಲ್ಲಿಸಲು ಆಗದಿದ್ದರೆ ಮತದಾರ ಆಗುವುದಿಲ್ಲ. ಹೆಸರಿನ ಜೊತೆ ಇರುವ ಅಕ್ಷರಗಳಲ್ಲಿ ಒಂದು ಅಕ್ಷರ ಬದಲಾದರು ಸಹ ಮತದಾರರ ಪಟ್ಟಿಯಲ್ಲಿ ಹೆಸರು ರದ್ದು ಆಗುತ್ತದೆ. ಬಿಜೆಪಿ ಅವರು ಜನಜಾಗೃತಿ ಮಾಡಬೇಕು ಅದನ್ನು ಮಾಡುತ್ತಿಲ್ಲ. ಚುನಾವಣೆ ಲಾಭಕ್ಕಾಗಿ ಎಸ್ ಐ ಆರ್ ಮಾಡುತ್ತಿರುವುದು ಸರಿಯಲ್ಲ ಎಂದರು..

ಎಸ್ ಐ ಆರ್ ಪ್ರಕ್ರಿಯೆಯಲ್ಲಿ ದಲಿತರು, ಅಲ್ಪಸಂಖ್ಯಾತರಿಗೆ ತೊಂದರೆ ಆಗುತ್ತಿದೆ. ಯಾರೇ ತಪ್ಪು ಮಾಡಿದರು ಅವರಿಗೆ ಶಿಕ್ಷೆ ಇದೆ ಆದರೆ ಇಂತಹ ವಿಚಾರದಲ್ಲಿ ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ಎನ್ನುವುದೇ ಇಲ್ಲ.. ಅಂತಹ ಕಾಯ್ದೆ ಮೋದಿ ಸರ್ಕಾರ ತಂದಿದೆ ಅದಕ್ಕೆ ಸುಪ್ರೀಂ ಕೋರ್ಟ್ ಕೂಡ ಅಸ್ತು ಅಂದಿದೆ.. ಎಷ್ಟೋ ಜನ ನಾವು ಇಲ್ಲೇ ಹುಟ್ಟಿದ್ದೇವೆ, ಇಲ್ಲೇ ಓದಿದ್ದೇವೆ ಎಂದು ಸುಮ್ಮನಿರುತ್ತಾರೆ. ಆದರೆ ಅರ್ಜಿ ಹಾಕದೆ ಹೋದಲ್ಲಿ ಎಲ್ಲರದ್ದು ರದ್ದು ಆಗುತ್ತದೆ.  ಹಳ್ಳಿ ಜನರಿಗೆ ಇಂತಹ ವಿಚಾರ ಗೊತ್ತಿಲ್ಲ.. ದೇಶ ಆಡಳಿತ ಮಾಡುವ ಬದಲು ಲಾಭಕ್ಕಾಗಿ ಮಾಡುತ್ತಿದ್ದಾರೆ ಎಂದರು..

ನಮ್ಮ ಕಾನೂನು 100 ಜನ ಅಪರಾಧಿಗೆ ಶಿಕ್ಷೆ ಆಗುವುದು ಬೇರೆ ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂದು ಹೇಳುತ್ತದೆ..  ಈ ದೇಶದಲ್ಲಿ 150 ಕ್ಕೂ ಹೆಚ್ಚು ಟಿವಿ ಮಾಧ್ಯಮಗಳು ನರೇಂದ್ರ ಮೋದಿ ಪರ ಇದ್ದಾವೆ.. ಅದರ ಮುಖ್ಯಸ್ಥರು ಅದಾನಿ ಹಾಗೂ ಅಂಬಾನಿ ಕಡೆಯವರು ಆಗಿದ್ದಾರೆ.. ಮೆಸ್ಕಾಂ ಅವರು ಖಾಸಗಿಕರಣ ಮಾಡಬೇಡಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ನಾನು ಕಣ್ಣಲ್ಲೇ ನೋಡುತ್ತಿದ್ದೇನೆ ಹವಾಯ್ ಚಪ್ಪಲಿ ಹಾಕಿಕೊಂಡು ಇದ್ದವರೆಲ್ಲ ಎಲ್ಲೋ ಮೇಲೆ ಹೋಗುತ್ತಿದ್ದಾರೆ. ಹಾಗಾಗಿ ಇದನ್ನೆಲ್ಲಾ ಸರಿಪಡಿಸಬೇಕಾಗಿದೆ. ಈ ದೇಶದಲ್ಲಿ ಹುಟ್ಟಿದವರನ್ನು ಅಲ್ಲ ಎನ್ನಲು ಮೋದಿ ಯಾರು? ಎಂದು ವಾಗ್ದಾಳಿ ನಡೆಸಿದರು..

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್, ಮಂಜುಳಾ ನಾಗೇಂದ್ರ, ಶಬನಮ್, ವಿಲಿಯಮ್ ಮಾರ್ಟೀಸ್ ಸೇರಿ ಹಲವರು ಉಪಸ್ಥಿತರಿದ್ದರು..




Previous Post Next Post