ಗಡಿಕಲ್ ನಲ್ಲಿ ಗೋ ಕಳ್ಳತನಕ್ಕೆ ಯತ್ನ - ವಿಡಿಯೋ ವೈರಲ್ ಬೆನ್ನಲ್ಲೇ ಕೇಸ್ ದಾಖಲು..!
ತೀರ್ಥಹಳ್ಳಿ: ತೀರ್ಥಹಳ್ಳಿ - ಕೊಪ್ಪ ಮಾರ್ಗ ಮಧ್ಯೆಯ ಗಡಿಕಲ್ ಸರ್ಕಲ್ ನಲ್ಲಿ ರಸ್ತೆಯಲ್ಲಿ ಮಲಗಿರುವ ಬೀಡಾಡಿ ದನಗಳನ್ನು ಕಳ್ಳರು ಕಾರಿನಲ್ಲಿ ಅಪಹರಿಸಲು ಯತ್ನಿಸಿದ ಘಟನೆಗೆ ಸಮಾಬಂಧಪಟ್ಟಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಮಂಗಳವಾರ ತಡ ರಾತ್ರಿ ಕಾರಿನಲ್ಲಿ ಕಳ್ಳರು ಬಂದು ದನಗಳನ್ನು ಹಿಡಿದು ವಾಹನಕ್ಕೆ ತುಂಬಿಸಿಕೊಳ್ಳಲು ಯತ್ನಿಸುತ್ತಿದ್ದ ದೃಶ್ಯವು ಅದೇ ಮಾರ್ಗವಾಗಿ ಬಂದ ಮತ್ತೊಂದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.. ವಿಡಿಯೋ ಆಧರಿಸಿ ಗಸ್ತುನಿರತ ಹೆಡ್ ಕಾನ್ಸ್‌ಟೇಬಲ್ ಗಿರಿಧರ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಸ್ವಯಂಪ್ರೇರಿತವಾಗಿ ಕಳ್ಳತನ ಯತ್ನದ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಮಂಗಳವಾರ ತಡ ರಾತ್ರಿ 12.50ರ ಸಮಯದಲ್ಲಿ ಈ ಕೃತ್ಯ ನಡೆದಿತ್ತು. ದುಷ್ಕರ್ಮಿಗಳು ದನಗಳನ್ನು ಕಾರಿಗೆ ತುಂಬಿಸುತ್ತಿದ್ದಾಗ, ಹಿಂಬದಿಯಿಂದ ಮತ್ತೊಂದು ಕಾರು ಬಂದ ಕಾರಣ ಹೆದರಿದ ಕಳ್ಳರು ದನಗಳನ್ನು ಅಲ್ಲಿಯೇ ಬಿಟ್ಟು ಕಾರಿನಲ್ಲಿ ಪರಾರಿಯಾಗಿದ್ದರು.
Tags:
ತೀರ್ಥಹಳ್ಳಿ ಸುದ್ದಿ