ಗನ್ ನಿಂದ ಗುಂಡು ಹಾರಿಸಿಕೊಂಡು ವ್ಯಕ್ತಿ ಸಾವು..!. Shoot out

ಗನ್ ನಿಂದ ಗುಂಡು ಹಾರಿಸಿಕೊಂಡು ವ್ಯಕ್ತಿ ಸಾವು..!

ಹೊಸನಗರ :  ಗನ್ ನಿಂದ ಗುಂಡು ಹಾರಿಸಿಕೊಂಡು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಿಟ್ಟೂರು ಸಮೀಪದ ತಟ್ಟೆಕೊಡ್ಲು ಎನ್ನುವಲ್ಲಿ ನಡೆದಿದೆ.

ತಟ್ಟೆಕೊಡ್ಲು ರಾಮಚಂದ್ರ ರಾವ್ (85) ಸಾವನ್ನಪ್ಪಿರುವ ವ್ಯಕ್ತಿ
ಮಧ್ಯರಾತ್ರಿ 1:30 ರ ಸುಮಾರಿಗೆ ಶೂಟ್ ಮಾಡಿಕೊಂಡು ಅತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಸಿಂಗಲ್ ಬ್ಯಾರಲ್ ಗನ್ ನಿಂದ
ಕುತ್ತಿಗೆ ಸಮೀಪ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ವ್ಯಕ್ತಿಯ ತಲೆ ಸಂಪೂರ್ಣವಾಗಿ ಚಿದ್ರ ಚಿದ್ರವಾಗಿದೆ.

ರಾಮಚಂದ್ರರಾವ್ ಮೂರು ದಿನಗಳ ಹಿಂದೆ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಅದ್ರೆ ನೋವು ಕಡಿಮೆಯಾಗಿರಲಿಲ್ಲ ಹೀಗಾಗಿ ಅತೀವ ನೋವಿನಿಂದ ಅತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

ಗನ್ ಗೆ ಲೈಸೆನ್ಸ್ ಇತ್ತಾ ಎನ್ನುವ ಬಗ್ಗೆ ನಗರ ಪೊಲೀಸರ ಪರಿಶೀಲನೆ ನಡೆಸುತ್ತಿದ್ದಾರೆ. ಟ್ರಿಗರ್ ಹೇಗೆ ಪ್ರೆಸ್ ಮಾಡಿದ್ರು ಎಂದು ಪರಿಶೀಲನೆ ನಡೆಸುತ್ತಿದ್ದು  ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ..
Previous Post Next Post