ಆರ್ ಸಿ ಬಿ ಹಾಗೂ ಗುಜರಾತ್ ನಡುವೆ ಫೈನಲ್ ಪಂದ್ಯ - ತೀರ್ಥಹಳ್ಳಿಯ ವಿನಾಯಕ ಚಿತ್ರಮಂದಿರದಲ್ಲಿ ನೇರಪ್ರಸಾರ
ತೀರ್ಥಹಳ್ಳಿ : ಐಪಿಎಲ್ 2026ರ ಫೈನಲ್ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ನಡುವೆ ನಡೆಯಲಿದ್ದು ಎರಡನೇ ಬಾರಿಗೆ ಐಪಿಎಲ್ ಟ್ರೋಫಿಯನ್ನ ಎತ್ತಿ ಹಿಡಿಯುವ ತವಕದಲ್ಲಿ ಆರ್‌ಸಿಬಿ ತಂಡ ಇದೆ. ಈ ಹಿನ್ನೆಲೆಯಲ್ಲಿ ಫೈನಲ್ ಪಂದ್ಯದ ನೇರ ಪ್ರಸಾರವನ್ನು ತೀರ್ಥಹಳ್ಳಿಯ ವಿನಾಯಕ ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿದೆ.
ನಾಳೆ ಸಂಜೆ 7:30ಕ್ಕೆ ಈ ನೇರಪ್ರಸಾರ ಆರಂಭವಾಗಲಿದ್ದು ಕ್ರೀಡಾ ಅಭಿಮಾನಿಗಳು ಪಂದ್ಯವನ್ನ ವೀಕ್ಷಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರೋತ್ಸಾಹಿಸಿ, ಎಲ್ಲರೂ ಸಂಭ್ರಮಿಸಲು ವಿನಾಯಕ ಚಿತ್ರಮಂದಿರದ ಮಾಲೀಕರು ಈ ಮೂಲಕ ತಿಳಿಸಿದ್ದಾರೆ..
Tags:
ತೀರ್ಥಹಳ್ಳಿ ಸುದ್ದಿ