ತೀರ್ಥಹಳ್ಳಿ ತಾಲೂಕಿನ ಫಾರಂ ಹೌಸ್ ನಲ್ಲಿ ನಡೆದ ಕಳ್ಳತನ - 1 ಲಕ್ಷಕ್ಕೂ ಹೆಚ್ಚಿನ ಮಾಲಿನ ಸಮೇತ ಇಬ್ಬರ ಬಂಧನ Agumbe

ತೀರ್ಥಹಳ್ಳಿ ತಾಲೂಕಿನ ಫಾರಂ ಹೌಸ್ ನಲ್ಲಿ ನಡೆದ ಕಳ್ಳತನ - 1 ಲಕ್ಷಕ್ಕೂ ಹೆಚ್ಚಿನ ಮಾಲಿನ ಸಮೇತ ಇಬ್ಬರ ಬಂಧನ 

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಅಣ್ಣುವಳ್ಳಿ ಗ್ರಾಮದ ಫಾರಂ ಹೌಸ್ ನಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಭೇದಿಸಿದ ಆಗುಂಬೆ ಪೊಲೀಸರು 1 ಲಕ್ಷಕ್ಕೂ ಹೆಚ್ಚಿನ ಮಾಲಿನ ಸಮೇತ ಇಬ್ಬರನ್ನು ಬಂಧಿಸಿದ್ದಾರೆ..

ದಿನಾಂಕ 02-06-2026 ರಂದು ಕಳ್ಳತನ ಪ್ರಕರಣವನ್ನು ಬೇಧಿಸಲು ಹೊರಟ ಆಗುಂಬೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವನಗೌಡ ಪಾಟೀಲ್ ನೇತೃತ್ವದ ತಂಡ  07 ಮೊಬೈಲ್ ಫೋನ್‌ಗಳು ಅಂದಾಜು ಮೌಲ್ಯ 1,41,000/- ರೂ ಗಳು ಹಾಗೂ ಕೃತ್ಯಕ್ಕೆ ಬಳಸಿದ ಕೆಎ 14 ಇಡಿ 7699 ಕಪ್ಪು ಬಣ್ಣದ ಪಲ್ಸರ್ ಬೈಕ್ ಅಂದಾಜು ಮೌಲ್ಯ -30,000/- ರೂ ಗಳು ಸೇರಿ ಒಟ್ಟು 1 ಲಕ್ಷದ 71 ಸಾವಿರ ರೂ ಗಳ ಮಾಲು ಹಾಗೂ ಇಬ್ಬರನ್ನು ತಮ್ಮ ವಶಪಡಿಸಿಕೊಂಡಿದ್ದಾರೆ..

ಪ್ರಕರಣದ ಆರೋಪಿಗಳಾದ ಭದ್ರಾವತಿ ತಾಲೂಕಿನ ಹೊಸಮನೆಯ 34 ವರ್ಷದ ಬಾಲರಾಜ್@ ಕಿರಣ ಬಿನ್ ಜಾನ್ ಹಾಗೂ 20 ವರ್ಷದ ಹರ್ಷ ಬಿನ್ ಮಂಜ ಇಬ್ಬರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.  ಆಗುಂಬೆ ಪೋಲೀಸರ ಈ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕರು ಅಭಿನಂದನೆಗಳನ್ನು ತಿಳಿಸಿದ್ದಾರೆ.




Previous Post Next Post