ಒಂದು ಶಾಲೆ ಅಭಿವೃದ್ಧಿ ಮಾಡಿದರೆ ಅದು ಒಂದು ದೇವಸ್ಥಾನ ಕಟ್ಟಿದಂತೆ - ಆರಗ ಜ್ಞಾನೇಂದ್ರ Araga jnanendra

ಒಂದು ಶಾಲೆ ಅಭಿವೃದ್ಧಿ ಮಾಡಿದರೆ ಅದು ಒಂದು ದೇವಸ್ಥಾನ ಕಟ್ಟಿದಂತೆ - ಆರಗ ಜ್ಞಾನೇಂದ್ರ 
ತೀರ್ಥಹಳ್ಳಿ  : ರಾಜ್ಯದಲ್ಲಿ ಇಂದಿನಿಂದ ಶಾಲಾ ಆರಂಭ ಆಗುತ್ತಿದೆ. ಬಹಳ ದಿನಗಳ ನಂತರ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಮಕ್ಕಳನ್ನು ಅತ್ಯಂತ ಸಹನೆಯಿಂದ ನೋಡಿಕೊಳ್ಳಬೇಕು. ನಮಗೆಲ್ಲ ಶಾಲೆ ಆರಂಭ ಆಗುತ್ತಿದ್ದರೆ ಶಾಲೆಗೆ ಅಳುತ್ತಾ ಬರುತ್ತಿದ್ದೇವು, ಮನೆಯಿಂದ ಶಾಲೆಯವರೆಗೂ ಹೊಡೆಯುತ್ತ ಬರುತ್ತಿದ್ದರು. ಇಂದು ಬೈದರೂ ಕಷ್ಟವಾಗುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

ಸೀಬಿನಕೆರೆ ಶಾಲೆಯ ಪ್ರಾರಂಭದ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಅವರು ಒಂದು ಶಾಲೆ ಅಭಿವೃದ್ಧಿ ಮಾಡಿದರೆ ಅದು ಒಂದು ದೇವಸ್ಥಾನ ಕಟ್ಟಿದಂತೆ. ಸೀಬಿನಕೆರೆ ಶಾಲೆಯಲ್ಲಿ ಮೊದಲು 200-300 ವಿದ್ಯಾರ್ಥಿಗಳು ಇದ್ದರು. ಆ ನಂತರ 17 ಮಕ್ಕಳಿಗೆ ಬಂದು ನಿಂತಿತ್ತು. ಈಗ ಮತ್ತೊಮ್ಮೆ 200 ವಿದ್ಯಾರ್ಥಿಗಳನ್ನು ದಾಟಿದೆ. ಅಂದರೆ ಈ ಶಾಲೆ ಒಳ್ಳೆಯ ಶಾಲೆ ಎಂದು ಪ್ರಸಿದ್ದಿ ಆಗಿದೆ ಎಂದರ್ಥ. ಸರ್ಕಾರಿ ಶಾಲೆ ಎಂದರೆ ಉದಾಸೀನ ಮಾಡಬೇಡಿ. ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಖಾಸಗಿ ಶಾಲೆಯ ಬದಲಾಗಿ ಇಲ್ಲಿ ಎಲ್ಲವೂ ಸೌಲಭ್ಯ ಇದೆ. ಇದನ್ನು ಸದುಪಯೋಗ ಮಾಡಿಕೊಳ್ಳಿ ಎಂದರು..

 ತೀರ್ಥಹಳ್ಳಿಯಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಈ ಬಾರಿ ಶೇ 100 % ರಿಸಲ್ಟ್ ಬಂದಿದೆ. ಇಲ್ಲಿನ ಶಿಕ್ಷಕರು ಒಳ್ಳೆಯ ಶಿಕ್ಷಕರು ಇದ್ದಾರೆ. ನಾನು ಈ ಶಾಲೆಗೆ 48 ಲಕ್ಷ ಹಣ ನೀಡಿದ್ದೇನೆ. ಈ ಶಾಲೆಗಾಗಿ ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ನಾನು ಮಾಡುತ್ತೇನೆ. ಪೋಷಕರ ಸಭೆಗೆ ಬಂದು ಶಾಲೆಗೆ ಏನೆಲ್ಲಾ ಮಾಡಬಹುದು ಎಂದು ಚರ್ಚೆ ಮಾಡಿ.. ಶಾಲೆಗೆ ಶಕ್ತಿ ತುಂಬುವ ಕೆಲಸ ನಾವು ನೀವೆಲ್ಲರೂ ಮಾಡೋಣ ಎಂದು ತಿಳಿಸಿದರು..
Previous Post Next Post