ಹೆದ್ದಾರಿ ಮಧ್ಯೆ ಬಿದ್ದ ಮರ, ಸಾಗರ – ಶಿವಮೊಗ್ಗ ಮಧ್ಯೆ ವಾಹನ ಸಂಚಾರ ತಾತ್ಕಾಲಿಕ ಸ್ಥಗಿತ Road Block

ಹೆದ್ದಾರಿ ಮಧ್ಯೆ ಬಿದ್ದ ಮರ, ಸಾಗರ – ಶಿವಮೊಗ್ಗ ಮಧ್ಯೆ ವಾಹನ ಸಂಚಾರ ತಾತ್ಕಾಲಿಕ ಸ್ಥಗಿತ 

ಸಾಗರ: ಸಾಗರದ ಹಲವು ಕಡೆ ಧಾರಾಕಾರ ಮಳೆಯಾಗುತ್ತಿದ್ದು ರಾಷ್ಟ್ರೀಯ ಹೆದ್ದಾರಿ 69ರ ಪೆಟ್ರೋಲ್ ಬಂಕ್ ಬಳಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇದರಿಂದ ಶಿವಮೊಗ್ಗ – ಸಾಗರ ನಡುವೆ ವಾಹನ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ರಸ್ತೆಗೆ ಬಿದ್ದಿರುವ ಮರ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಆದ್ದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಅನಿವಾರ್ಯವಾಗಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕಿದೆ.

ಸಾಗರ ಕಡೆಯಿಂದ ಶಿವಮೊಗ್ಗಕ್ಕೆ ಪ್ರಯಾಣಿಸುವವರು ರಿಪ್ಪನ್‌ಪೇಟೆ-ಆಯನೂರು ಮಾರ್ಗವಾಗಿ ಸಂಚರಿಸಬೇಕು. ಹಾಗೆಯೇ ಆಯನೂರು ಕಡೆಯಿಂದ ಸಾಗರಕ್ಕೆ ತೆರಳುವ ಪ್ರಯಾಣಿಕರು ಆಯನೂರು-ರಿಪ್ಪನ್‌ಪೇಟೆ-ಆನಂದಪುರ ಮಾರ್ಗವನ್ನು ಬಳಸುವಂತೆ ಆನಂದಪುರ ಪಿಎಸ್‌ಐ ತಿಳಿಸಿದ್ದಾರೆ. ಮರ ತೆರವು ಕಾರ್ಯಾಚರಣೆ ಬಳಿಕ ಈ ಮಾರ್ಗದಲ್ಲಿ ವಾಹನ ಸಂಚಾರ ಪುನಾರಂಭವಾಗಲಿದೆ.
Previous Post Next Post