ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರದ ನಂತರ ತೀರ್ಥಹಳ್ಳಿಗೆ ಭೇಟಿ ನೀಡುತ್ತಾರ ಡಿ ಕೆ ಶಿವಕುಮಾರ್?
ಕಂಬದ ಗಣಪತಿಗೆ ಸಲ್ಲಿಸಿದ್ದ ಬೇಡಿಕೆ ಕಡೆಗೂ ಈಡೇರಿದ್ದು ಹೇಗೆ?
ತೀರ್ಥಹಳ್ಳಿ : ಅದು 2023, ರಾಜ್ಯದಲ್ಲಿ ಗ್ಯಾರೆಂಟಿ ಯೋಜನೆಗಳ ಮೂಲಕವೇ ಸರ್ಕಾರ ರಚನೆಗೆ ಮುಂದಾಗಿದ್ದ ಕಾಂಗ್ರೆಸ್ ಸರ್ಕಾರದ ನಾಯಕರಾದ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಮಹದಾಸೆಯಿಂದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಹಲವು ದೇವಸ್ಥಾನಗಳಲ್ಲಿ ಹರಕೆಯನ್ನು ಸಹ ಹೊತ್ತಿದ್ದರು. ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರ ಆಪ್ತರಾಗಿರುವ ಮಲೆನಾಡು ಪ್ರದೇಶ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾಗಿರುವ ಆರ್ ಎಂ ಮಂಜುನಾಥಗೌಡರವರು ಡಿ.ಕೆ ಶಿವಕುಮಾರ್ ಅವರನ್ನು ತೀರ್ಥಹಳ್ಳಿಗೆ ಕರೆಸಿಕೊಂಡು ಕಂಬದ ಗಣಪತಿ ಬಳಿ ತಮ್ಮ ಬೇಡಿಕೆಯನ್ನ ಸಲ್ಲಿಸಲು ತಮ್ಮ ಮನವಿ ಸಲ್ಲಿಸಿದ್ದರು..
ಇದರಂತೆ 2023ರಲ್ಲಿ ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಡಿ.ಕೆ ಶಿವಕುಮಾರ್ ಕಂಬದ ಗಣಪತಿ ಬಳಿ ಹರಕೆಯನ್ನ ಹೇಳಿಕೊಂಡಿದ್ದರು. ಒಂದು ವೇಳೆ ತಾನು ಮುಖ್ಯಮಂತ್ರಿ ಆಗಿದ್ದೆ ಆದಲ್ಲಿ ಕಂಬದ ಗಣಪತಿಗೆ ಬೆಳ್ಳಿ ಮುಖವಾಡವನ್ನ ಕೊಡುವುದಾಗಿ ತಮ್ಮ ಹರಕೆಯನ್ನು ಹೇಳಿಕೊಂಡಿದ್ದರು . ಅದರಂತೆ ಈಗ ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ನಾಳೆ ಡಿ.ಕೆ ಶಿವಕುಮಾರ್ ವಿಧಾನಸೌಧದ ಮುಂಭಾಗ ಪ್ರಮಾಣವಚವನ್ನು ಸ್ವೀಕರಿಸಲಿದ್ದಾರೆ..
2023ರಲ್ಲಿ ಹೇಳಿಕೊಂಡಿದ್ದ ತಮ್ಮ ಹರಕೆಯನ್ನು ಶೀಘ್ರದಲ್ಲಿಯೇ ತೀರಿಸುವ ಸಲುವಾಗಿ ತೀರ್ಥಹಳ್ಳಿಯ ಶ್ರೀರಾಮೇಶ್ವರ ದೇವಸ್ಥಾನಕ್ಕೆ ಭೇಟಿ ಕೊಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.. ಮುಖ್ಯಮಂತ್ರಿಯಾಗಿ ಮೊಟ್ಟ ಮೊದಲ ಬಾರಿಗೆ ತೀರ್ಥಹಳ್ಳಿಗೆ ಡಿ.ಕೆ ಶಿವಕುಮಾರ್ ಆಗಮಿಸುವ ಸಾಧ್ಯತೆ ಇದ್ದು ಅದರಲ್ಲೂ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ ಹರಕೆಯ ಬೆಳ್ಳಿ ಮುಖವಾಡವನ್ನು ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ...
Tags:
ರಾಮೇಶ್ವರ ದೇವಸ್ಥಾನ