ಶಿವಮೊಗ್ಗದಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ - ಮೆಗ್ಗಾನ್ ಆಸ್ಪತ್ರೆ ಸಮೀಪ ರಸ್ತೆಗೆ ಉರುಳಿದ ಮರ Rain

ಶಿವಮೊಗ್ಗದಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ - ಮೆಗ್ಗಾನ್ ಆಸ್ಪತ್ರೆ ಸಮೀಪ ರಸ್ತೆಗೆ ಉರುಳಿದ ಮರ

ಶಿವಮೊಗ್ಗ :  ಕಳೆದ 20 ನಿಮಿಷದಲ್ಲಿ ಆಲಿಕಲ್ಲಿನ ಸಮೇತ ಭರ್ಜರಿ ಮಳೆಯಾಗುತ್ತಿದೆ. ಬೆಳೆಗ್ಗೆಯೆಲ್ಲ ಬಿಸಿಲಿನ ತಾಪಕ್ಕೆ ಸೊರಗಿದ್ದ ಶಿವಮೊಗ್ಗದ ಜನತೆಗೆ ಸಂಜೆ ಸುರಿದ ಆಲಿಕಲ್ಲು ಸಮೇತ ಮಳೆಗೆ ಸ್ವಲ್ಪ ಮಟ್ಟಿಗೆ ತಂಪಾದಂತೆ ಕಾಣಿಸುತ್ತಿದೆ.

ಕಳೆದ ನಾಲ್ಕೈದು ದಿನಗಳಿಂದ ನಾಲ್ಕು ಹನಿ ಮಳೆ ಸುರಸಿ ಹೋಗಿದ್ದ ಮಳೆ ಇಂದು ಆಲಿಕಲ್ಲಿನ ಸಮೇತ ಬಿದ್ದು ತಂಪೆರೆದಿದೆ. ಜೊತೆಗೆ ಗುಡುಗು ಮಿಂಚು, ಸಹಿತ ಸಮೇತ ಮಳೆಯಾಗುತ್ತಿದೆ.

ಇದರ ಜೊತೆಗೆ ಮೆಗ್ಗಾನ್ ಆಸ್ಪತ್ರೆ ಸಮೀಪ ಮರವೊಂದು ರಸ್ತೆಗೆ ಉರುಳಿ ಬಿದ್ದಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಇಡೀ ರಸ್ತೆಗೆ ಮರ ಉರುಳಿ ಬಿದ್ದಿದ್ದು ಯಾರಿಗೂ ತೊಂದರೆ ಆಗಿಲ್ಲ..





Previous Post Next Post