ತೀರ್ಥಹಳ್ಳಿಯಲ್ಲೂ ಮಳೆ - ತಂಪೆರೆದ ವರುಣ
ತೀರ್ಥಹಳ್ಳಿ : ಇಂದು ಸಂಜೆ ವೇಳೆ ತೀರ್ಥಹಳ್ಳಿಯಲ್ಲಿ ಮಳೆರಾಯ ಎಂಟ್ರಿ ಕೊಟ್ಟಿದ್ದಾನೆ. ಕೆಲವು ಘಂಟೆಗಳ ಹಿಂದೆ ಶಿವಮೊಗ್ಗದಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿತ್ತು. ಈಗ ತೀರ್ಥಹಳ್ಳಿ ತಾಲೂಕಿನ ಹಲವು ಭಾಗದಲ್ಲಿ ತುಂತುರು ಮಳೆಆಗುತ್ತಿದೆ.
ಬಿಸಿಲಿನ ತಾಪದಿಂದ ಕೆಂಗೆಟ್ಟು ಕುಳಿತಿದ್ದ ಜನರಿಗೆ ಮಳೆರಾಯ ಸ್ವಲ್ಪ ಮಟ್ಟಿಗೆ ಕೂಲ್ ಮಾಡಿದ್ದಾನೆ.
ಮೋಡ ಕವಿದ ವಾತಾವರಣ ಗುಡುಗು ಮಿಂಚಿನ ಜೊತೆಗೆ ಜಿಟಿ ಜಿಟಿ ಮಳೆಯಾಗುತ್ತಿದ್ದು ಇನ್ನು ನಾಲ್ಕು ದಿನಗಳ ಕಾಲ
ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ
ಮಾಹಿತಿ ನೀಡಿದೆ.
Tags:
ತೀರ್ಥಹಳ್ಳಿ ಸುದ್ದಿ