ಬಾಳಗಾರಿನಲ್ಲಿ ಸಿಲಿಂಡರ್ ಗೆ ಬೆಂಕಿ..! ಅಗ್ನಿಶಾಮಕ ದಳ ಡೌಡು..! tth

ಬಾಳಗಾರಿನಲ್ಲಿ ಸಿಲಿಂಡರ್ ಗೆ ಬೆಂಕಿ..! ಅಗ್ನಿಶಾಮಕ ದಳ ಡೌಡು..!
ತೀರ್ಥಹಳ್ಳಿ :  ಮನೆಯಲ್ಲಿ ಸಿಲಿಂಡರ್ ಗೆ ಏಕಾಏಕಿ ಬೆಂಕಿ ಹತ್ತಿಕೊಂಡಿದ್ದು ಬೆಂಕಿ ಆರಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ..

ಬಾಳಗಾರಿನ ನಾಗರಾಜ್ ಭಟ್ ಎನ್ನುವವರ ಮನೆಯಲ್ಲಿ ಬಳಸುತ್ತಿದ್ದ ಎಚ್ ಪಿ ಗ್ಯಾಸ್ ಸಿಲಿಂಡರ್ ಗೆ ಏಕಾಏಕಿ ಬೆಂಕಿ ಹತ್ತಿಕೊಂಡಿದೆ. ಗ್ಯಾಸ್ ಬ್ಲಾಸ್ಟ್ ಆಗುವ ಭಯದಲ್ಲಿ ಬೆಂಕಿ ನಂದಿಸುವ ಪ್ರಯತ್ನ ನಡೆದಿದೆ. ಆ ನಂತರ ಎಚ್ ಪಿ ಗ್ಯಾಸ್ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸುತ್ತಿದ್ದಾರೆ..

ಗ್ಯಾಸ್ ಸಿಲಿಂಡರ್ ನಿಂದ ಲೀಕ್ ಆಗಿದ್ದ ಕಾರಣದಿಂದ ಬೆಂಕಿ ಹತ್ತಿಕೊಂಡಿತ್ತು ಎಂದು ಅಗ್ನಿಶಾಮಕದಳದ ಸಿಬ್ಬಂದಿಗಳು ತಿಳಿಸಿದ್ದಾರೆ.


Previous Post Next Post