ಫೆ. 5 ರಂದು ತೀರ್ಥಹಳ್ಳಿಯಲ್ಲಿ ಐದನೇ ಡಿಸಿಸಿ ಬ್ಯಾಂಕ್ ಶಾಖೆ ಆರಂಭ - ಮಂಜುನಾಥ್ ಗೌಡರು.. Manjunath gowda

ಫೆ. 5 ರಂದು ತೀರ್ಥಹಳ್ಳಿಯಲ್ಲಿ ಐದನೇ ಡಿಸಿಸಿ ಬ್ಯಾಂಕ್ ಶಾಖೆ ಆರಂಭ - ಮಂಜುನಾಥ್ ಗೌಡರು..
ತೀರ್ಥಹಳ್ಳಿ : 2027 ರ ಹೊತ್ತಿಗೆ ಎಲ್ಲಾ ಹೋಬಳಿಗಳಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ತೆರರೆಯಬೇಕು ಎಂಬ ಆಸೆ ಇಟ್ಟುಕೊಂಡಿದ್ದೇವೆ. ತೀರ್ಥಹಳ್ಳಿಯಲ್ಲಿ ಈಗಾಗಲೇ ನಾಲ್ಕು ಶಾಖೆ ಕಾರ್ಯನಿರ್ವಹಿಸುತ್ತಿವೆ. ಈಗ ಮತ್ತೊಂದು ಶಾಖೆ ಫೆ. 5 ರ ಗುರುವಾರ ಪ್ರಾರಂಭಗೊಳ್ಳಲಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡರು ತಿಳಿಸಿದರು.

ಬಸವಾನಿ ವಿಜಯದೇವ್ ಅವರ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ತೀರ್ಥಹಳ್ಳಿಯ ಎಪಿಎಂಸಿ ಪ್ರಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ಸಹಕಾರ ಸಂಘದ 36 ನೇ ಶಾಖೆ ಆರಂಭಗೊಳ್ಳಲಿದೆ. ಸಾರ್ವಜನಿಕರು ಹಾಗೂ ರೈತರು ತಮ್ಮ ಉಳಿತಾಯದ ಹಣವನ್ನು ಬ್ಯಾಂಕಿನಲ್ಲಿ ತೊಡಗಿಸಿ ಬ್ಯಾಂಕಿನಿಂದ ದೊರೆಯುವ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು..

ಜಿಲ್ಲಾದ್ಯಂತ 30 ಸಾವಿರಕ್ಕೂ ಹಾಲು ಉತ್ಪಾದಕರು ಇದ್ದಾರೆ. ಅವರಿಗಾಗಿ ಯುಪಿಐ ಪೇಮೆಂಟ್ ಹೊಸದಾಗಿ ಅವಲಂಬಿಸುತ್ತಿದ್ದೇವೆ. ಇತ್ತೀಚಿಗೆ ಎಟಿಎಂ ಕಾರ್ಯಚಟುವಟಿಕೆ ಕಡಿಮೆ ಆಗುತ್ತಿದೆ. ಹಾಗಾಗಿ ಯುಪಿಐ ಪೇಮೆಂಟ್ ಮೂಲಕ ಮತ್ತಷ್ಟು ಅನುಕೂಲ ಆಗುವಂತೆ ಮಾಡುತ್ತಿದ್ದೇವೆ. 1.90 ಕೋಟಿ ರೈತರಿಗೆ ಬೆಳೆ ಸಾಲ ನೀಡಿದ್ದೇವೆ. ಸ್ವಸಹಾಯ ಸಂಘಗಳಿಗೆ 20 ಕೋಟಿ ಸಾಲ, ಹಾಗೂ ಇತರ ಸೊಸೈಟಿಗಳಿಗೆ ನೂರಾರು ಕೋಟಿ ಸಾಲ ನೀಡಲಾಗಿದೆ. ಒಟ್ಟಾಗಿ 500 ಕೋಟಿಗೂ ಹೆಚ್ಚು ಹಣ ಸಾಲ ನೀಡಲಾಗಿದೆ ಎಂದರು..

ತೀರ್ಥಹಳ್ಳಿಯಲ್ಲಿ ಇಲ್ಲಿಯವರೆಗೆ ನಾಲ್ಕು ಶಾಖೆ ಇದ್ದವು. ಅವೆಲ್ಲವೂ ಲಾಭದಾಯಕವಾಗಿ ಇವೆ. ರೈತರಿಗೆ ಅನುಕೂಲ ಆಗಲು 50 ಲಕ್ಷದವರೆಗೆ ಸಾಲ ಕೊಡಲಾಗುತ್ತಿದೆ. ಬೇಲಿ ಮಾಡಲು ಹಿಡಿದು ಟ್ರ್ಯಾಕ್ಟರ್ ಖರೀದಿ, ಹೀಗೆ ಹಲವು ಯೋಜನೆಗಳಿಗೆ ಸಾಲ ನೀಡಲಾಗುತ್ತಿದೆ ಎಂದರು..

ಈ ಸಂದರ್ಭದಲ್ಲಿ ಬಸವಾನಿ ವಿಜಯದೇವ್, ಪ. ಪಂ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ ಇದ್ದರು..

Previous Post Next Post