ಮೇಗರವಳ್ಳಿ ಶಾಲೆ ಎದುರು ಅಪಘಾತ - ಎರಡು ಕಾರು ಸಂಪೂರ್ಣ ಜಖಂ
ತೀರ್ಥಹಳ್ಳಿ : ಮೇಗರವಳ್ಳಿಯ ಶಾಲೆ ಎದುರು ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು ಹಿಂದಿನಿಂದ ಕೆಂಪು ಕಾರಿಗೆ ನೀಲಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕೆಂಪು ಕಾರು ಸಂಪೂರ್ಣ ಜಖಂಗೊಂಡಿದೆ.
ಕೆಂಪು ಕಾರಿನಲ್ಲಿ ಇದ್ದಂತಹ ಮೇಗರವಳ್ಳಿಯ ಅಶೋಕ್ ದಂಪತಿಗಳಿಗೆ ಭಾರಿ ಪೆಟ್ಟಾಗಿದ್ದು ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇಬ್ಬರು ತೀರ್ಥಹಳ್ಳಿಗೆ ಹೊರಟಿದ್ದರು. ಹಿಂದಿನಿಂದ ಬಂದಂತಹ ನೀಲಿ ಕಾರು ಕೆಂಪು ಕಾರಿಗೆ ಡಿಕ್ಕಿ ಹೊಡೆದಿದ್ದು ಕೆಂಪು ಕಾರು ಆನಂತರದಲ್ಲಿ ಪಕ್ಕದಲ್ಲಿದ್ದ ಹಲಸಿನ ಮರಕ್ಕೆ ಹೊಡೆದ ಪರಿಣಾಮವಾಗಿ ಕೆಂಪು ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.
ಅತಿ ವೇಗವಾಗಿ ಬಂದಂತಹ ನೀಲಿ ಕಾರಿನಿಂದಲೇ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೆಲವೇ ನಿಮಿಷಗಳ ಮುಂಚೆ ಶಾಲಾ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಶಾಲೆಗೆ ತೆರಳಿದ್ದರು . ಮಕ್ಕಳು ಶಾಲೆಗೆ ಒಳಹೋದ ಕೆಲವೇ ಕ್ಷಣಗಳಲ್ಲಿ ಈ ಅವಘಡ ಸಂಭವಿಸಿದೆ.
ಶಾಲೆಯ ಎದುರು ಬ್ಯಾರಿಕೆಡ್ ಹಾಕಬೇಕೆಂದು ಸ್ಥಳೀಯರು ತಿಳಿಸಿದ್ದಾರೆ.. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಜರುಗಿದೆ.
Tags:
ಅಪಘಾತ ಸುದ್ದಿ