ಬೆಳಗ್ಗೆ ಬಾಳಗಾರು ಸಂಜೆ ಮೇಲಿನಕುರುವಳ್ಳಿ ಗ್ಯಾಸ್ ಲೀಕ್ ಸಿಲಿಂಡರ್ ಗೆ ಬೆಂಕಿ..! tth

ಬೆಳಗ್ಗೆ ಬಾಳಗಾರು ಸಂಜೆ ಮೇಲಿನಕುರುವಳ್ಳಿ ಗ್ಯಾಸ್ ಲೀಕ್ ಸಿಲಿಂಡರ್ ಗೆ ಬೆಂಕಿ..!

ತೀರ್ಥಹಳ್ಳಿ :  ಲೇಔಟ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಬಿಹಾರ ಮೂಲದ ಕಾರ್ಮಿಕರು ಅಡುಗೆ ಮಾಡುವಾಗ ಗ್ಯಾಸ್ ಸ್ಟವ್ ನಲ್ಲಿ ಲೀಕ್ ಆದ ಹಿನ್ನಲೆಯಲ್ಲಿ ಸಿಲಿಂಡರ್ ಗೆ ಏಕಾಏಕಿ ಬೆಂಕಿ ಹತ್ತಿಕೊಂಡಿದ್ದು ಬೆಂಕಿ ಆರಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ..

ಮೇಲಿನಕುರುವಳ್ಳಿಯ ಕೊಪ್ಪ ರಸ್ತೆಯ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಬಿಹಾರ ಮೂಲದ ಕಾರ್ಮಿಕರ ತಂಡ ಕೆಲಸ ನಿರ್ವಹಿಸುತ್ತಿದ್ದಾರೆ. ಅಡುಗೆ ಮಾಡುವಾಗ ಬೆಂಕಿ ಹತ್ತಿಕೊಂಡಿದೆ. ಸ್ಥಳಕ್ಕೆ  ಅಗ್ನಿಶಾಮಕದಳದ ಸಿಬ್ಬಂದಿಗಳು  ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಇಂದು ಬೆಳಗ್ಗೆ ಬಾಳಗಾರಿನಲ್ಲಿ ಸಂಜೆ ಮೇಲಿನಕುರುವಳ್ಳಿಯಲ್ಲಿ ಒಂದೇ ರೀತಿಯಲ್ಲಿ ಘಟನೆ ನಡೆದಿದೆ..

Previous Post Next Post