ಫೆ. 17 ರಿಂದ ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆ marikamba jatre

ಫೆ. 17 ರಿಂದ ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆ 

ತೀರ್ಥಹಳ್ಳಿ : ಈ ಬಾರಿ ಫೆ 17 ರಿಂದ ಮಾರಿಕಾಂಬೆ ಜಾತ್ರೆ ಅತ್ಯಂತ ಅದ್ದೂರಿಯಾಗಿ ನಡೆಯಲಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆ ವರ್ಷದಿಂದ ವರ್ಷಕ್ಕೆ ಜನಮನ್ನಣೆ ಪಡೆಯುತ್ತಿದೆ. ಫೆ. 24 ರಂದು ಗೊಂಬೆಯನ್ನು ಕೂರಿಸಿ ಫೆ. 25 ರಂದು ಗೊಂಬೆ ವಿಸರ್ಜನೆ ನಡೆಯಲಿದೆ ಎಂದು ಎಂದು ದೇವಸ್ಥಾನ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ ತಿಳಿಸಿದರು.

ಮಂಗಳವಾರ ಮಾರಿಕಾಂಬಾ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಫೆ 17 ರಂದು ಮಾರಿಕಾಂಬಾ ದೇವಿಯ ಜಾತ್ರೆ ಸಾರಲಾಗುತ್ತದೆ. ಅಂದಿನಿಂದ ಪ್ರತಿದಿನ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಈ ಜಾತ್ರೆಯಲ್ಲಿ ಸರ್ವರೂ ಭಾಗಿಯಾಗಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಂಜುನಾಥ್ ಶೆಟ್ಟಿ, ಸತ್ಯನಾರಾಯಣ, ಚಂದ್ರಶೇಖರ, ಜಯರಾಮ್ ಶೆಟ್ಟಿ, ಧನಂಜಯ, ಪ್ರಭಾಕರ್, ಚಿದಾನಂದ್, ಜಯಪ್ರಕಾಶ್ ಶೆಟ್ಟಿ, ಜಯರಾಮ್ ಶೆಟ್ಟಿ, ನಾಗಪ್ಪ ಆಚಾರ್, ಬಿ ಆರ್ ರಾಘವೇಂದ್ರ ಶೆಟ್ಟಿ, ಸಂದೇಶ್ ಜವಳಿ, ಊರ್ವಶಿ ನಾಗರಾಜ್, ಅನಿಲ್ ಮಿಲ್ಕೇರಿ ಸೇರಿ ಹಲವರು ಉಪಸ್ಥಿತರಿದ್ದರು.




ಕಾರ್ಯಕ್ರಮಗಳು ಏನೇನು?

ಫೆ. 17 ರ ಮಂಗಳವಾರದಂದು ಮಹಾಪೂಜೆ, ಮಹಾಮಂಗಳಾರತಿ ದೇವಿ ದರ್ಶನ, ಅನ್ನಸಂತರ್ಪಣೆ ಹಾಗೂ  " ಜಾತ್ರೆ ಸಾರುವುದು

ಫೆ. 18 ರ ಬುಧವಾರದಂದು ಪಾರಾಯಣ, ವಿಶೇಷ ಪೂಜೆ, ಮಹಾಮಂಗಳಾರತಿ, ಅನ್ನಸಂತರ್ಪಣೆ ಸಂಜೆ ರಂಗಪೂಜೆ ನಡೆಯಲಿದೆ. ಸಂಜೆ ಸುಮುಖ ಸಂಗೀತ ನೃತ್ಯ ಶಾಲೆಯ ಹಾಗೂ ರಾಜರಾಜೇಶ್ವರಿ ನೃತ್ಯ ಶಾಲೆಯ ಕಲಾವಿದರಿಂದ    
 "ನೃತ್ಯ ಸಂಗಮ " ನಡೆಯಲಿದೆ..

ಫೆ. 19 ರ ಗುರುವಾರದಂದು ಪಾರಾಯಣ, ವಿಶೇಷ ಪೂಜೆ, ಮಹಾಮಂಗಳಾರತಿ, ಅನ್ನಸಂತರ್ಪಣೆ ಸಂಜೆ ರಂಗಪೂಜೆ ನಡೆಯಲಿದೆ. ಸಂಜೆ ಖ್ಯಾತ ಯಕ್ಷ ಕಲಾವಿದ ಪಟ್ಲ ಸತೀಶ್ ಶೆಟ್ಟಿ ಇವರ ಸಾರಥ್ಯದ ಪಾವಂಜೆ ಯಕ್ಷಗಾನ ಮೇಳ ಪ್ರಸ್ತುತ ಪಡಿಸುವ ಕಾಲಮಿತಿ ಯಕ್ಷಗಾನ ಪ್ರದರ್ಶನ " ಸಂಪೂರ್ಣ ದೇವಿ ಮಹಾತ್ಮೆ " ನಡೆಯಲಿದೆ.

ಫೆ. 20 ರ ಶುಕ್ರವಾರದಂದು ಪಾರಾಯಣ, ವಿಶೇಷ ಪೂಜೆ, ಮಹಾಮಂಗಳಾರತಿ ಅನ್ನಸಂತರ್ಪಣೆ ಸಂಜೆ ರಂಗಪೂಜೆ ನಡೆಯಲಿದೆ. ಸಂಜೆ ಸುಶ್ರಾವ್ಯ ಸಂಗೀತದೊಂದಿಗೆ ಬಣ್ಣದ ಚಿತ್ತಾರದ ಅನಾವರಣ "ಕಾವ್ಯ - ಸಂಗೀತ -  ಕಲಾಕುಂಚ " ಕಾರ್ಯಕ್ರಮ ನಡೆಯಲಿದೆ..

ಫೆ 21 ರಂದು  ಚಂಡಿಕಾಹೋಮ ಮಧ್ಯಾಹ್ನ 12:30 ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಸ್ಥಳೀಯ ಕಲಾವಿದರ "ಸಾಂಸ್ಕೃತಿಕ ಕಲರವ" , ಡ್ಯಾನ್ಸ್ ಪ್ಯಾಲೇಸ್ ಅವರಿಂದ "ನೃತ್ಯ ವೈವಿಧ್ಯ" ಹಾಗೂ ಸ್ಥಳೀಯ ಗಾಯಕರಿಂದ "ಸಂಗೀತ ಸುಧೆ" ನಡೆಯಲಿದೆ.

ಫೆ. 22 ರಂದು ಪಾರಾಯಣ ವಿಶೇಷ ಪೂಜೆ, ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ..
ಸಂಜೆ ಖ್ಯಾತ ಗಾಯಕ ಶ್ರೀ ರಾಜಗುರು ಹೊಸಕೋಟೆ ಬೆಂಗಳೂರು ಮತ್ತು ಬಳಗದ ಪ್ರಸ್ತುತಿಯಲ್ಲಿ "ಜಾನಪದ ಸಂಗೀತಕಾರ್ಯಕ್ರಮ ನಡೆಯಲಿದೆ..

ಫೆ. 23 ರಂದು ಬೆಳಗ್ಗೆ ಕಲ್ಪೊಕ್ತ ಪೂಜೆ, ಸಹಸ್ರನಾಮ 
ವಿಶೇಷ ಪೂಜೆ, ಮಹಾಮಂಗಳಾರತಿ , ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕಲರ್ಸ್ ಕನ್ನಡ ಖ್ಯಾತಿಯ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ " ಸಂಗೀತ ಗಾನ ಸಂಭ್ರಮ " ಕಾರ್ಯಕ್ರಮ ನಡೆಯಲಿದೆ.

ಫೆ. 24 ರಂದು ಮಧ್ಯಾಹ್ನ ಜಾತ್ರಾ ವಿಶೇಷ ಪೂಜೆಗಳು ಮಹಾಮಂಗಳಾರತಿ ಮತ್ತು ಅನ್ನ ಸಂತರ್ಪಣೆ ರಾತ್ರಿ 8 ಗಂಟೆಗೆ "ಎಣ್ಣೆ ಭಂಡಾರ ಪೂಜೆ " ನಡೆಯಲಿದೆ.
ಸಂಪ್ರದಾಯದಂತೆ ನಾಡ್ತಿ ಆಚಾರ್ ಕುಟುಂಬದವರು ಕೆತ್ತನೆ ಮಾಡಿದ ಗೊಂಬೆ ಪೂಜೆ ನಂತರ ಮೆರವಣಿಗೆ ಮೂಲಕ ಹೊರಟು ದೇವಸ್ಥಾನದ ಆವರಣದಲ್ಲಿ ಗೊಂಬೆಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುವುದು..

ಫೆ. 25 ರಂದು ಬೆಳಗ್ಗೆ 5 ಕ್ಕೆ "ಗೊಂಬೆ ಪೂಜೆ"
ಮಧ್ಯಾಹ್ನ 3 ರಿಂದ ವಿವಿಧ ವಾದ್ಯ ವೇಷ ಭೂಷಣಗಳೊಂದಿಗೆ ಅದ್ದೂರಿ ರಾಜಬೀದಿ ಉತ್ಸವ ನಂತರ ತುಂಗಾ ನದಿಯಲ್ಲಿ ಗೊಂಬೆ ವಿಸರ್ಜನೆ ನಡೆಯಲಿದೆ. ಸಂಜೆ 7:30 ಕ್ಕೆ ನಾಡ್ತಿಯಲ್ಲಿರುವ ಶ್ರೀ ಮಾರಿಕಾಂಬಾ ಸಭಾಂಗಣದಲ್ಲಿ ಭೋಜನ ಪ್ರಸಾದ ವಿತರಣೆ ಇರುತ್ತದೆ.







Previous Post Next Post