ಕ್ರೀಡೆಯಲ್ಲಿ ವಾಗ್ದೇವಿಯ ಸಮರ್ಥ್ ಮತ್ತು ಯಶ್ಚಿತ್ ರಾಜ್ಯಮಟ್ಟಕ್ಕೆ ಆಯ್ಕೆ
ತೀರ್ಥಹಳ್ಳಿ : ಶಾಲಾಶಿಕ್ಷಣ ಇಲಾಖೆಯವರು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆಸಿದ ಜಿಲ್ಲಾಮಟ್ಟದ ವಿಕಲಚೇತನರ ಕ್ರೀಡಾಕೂಟದಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸಮರ್ಥ್ ಸಿರಿವರ್ಧನ್ (8 ನೆಯ ತರಗತಿ) 100 ಮೀ ಓಟದಲ್ಲಿ ಪ್ರಥಮ ಸ್ಥಾನವನ್ನು ಹಾಗೂ ಯಶ್ಚಿತ್ ಎಸ್ (8 ನೆಯ ತರಗತಿ) ಜಾವಲಿನ್ ಎಸೆತ ದ್ವಿತೀಯ ಮತ್ತು
ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಅತ್ಯಂತ ಉತ್ಸಾಹಿಗಳಾದ ಈ ವಿದ್ಯಾರ್ಥಿಗಳು ಓದಿನಲ್ಲಿ ಮಾತ್ರವಲ್ಲದೇ ಆಟದಲ್ಲಿಯೂ ಮುಂದಿರುವುದು ಎಲ್ಲರ ಸಂತಸಕ್ಕೆ ಕಾರಣವಾಗಿದೆ. ರಾಜ್ಯಮಟ್ಟದಲ್ಲಿಯೂ ಅತ್ಯುತ್ತಮ ಸಾಧನೆಯನ್ನು ಮಾಡಿ ತಾಲ್ಲೂಕಿಗೆ ಜಿಲ್ಲೆಗೆ ಕೀರ್ತಿಯನ್ನು ತರಲಿ ಎಂದು ವಾಗ್ದೇವಿ ಸಮೂಹ ಶಿಕ್ಷಣ
ಸಂಸ್ಥೆಯ ಅಧ್ಯಕ್ಷರು ಸದಸ್ಯರು ಶಿಕ್ಷಕ ವೃಂದ ಹಾಗೂ ಪೋಷಕರು ಶುಭಹಾರೈಸಿದ್ದಾರೆ ಮತ್ತು
ಜಿಲ್ಲಾಮಟ್ಟದ ಗೆಲುವನ್ನು ಅಭಿನಂದಿಸಿದ್ದಾರೆ.
Tags:
ವಾಗ್ದೇವಿ ಸಂಸ್ಥೆ