ಹೃದಯಾಘಾತ ಆಗಿ ಕಷ್ಟದಲ್ಲಿದ್ದ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ ಕುರುವಳ್ಳಿ ನಾಗರಾಜ್ ಮತ್ತು ಸ್ನೇಹಿತರು tth

ಹೃದಯಾಘಾತ ಆಗಿ ಕಷ್ಟದಲ್ಲಿದ್ದ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ ಕುರುವಳ್ಳಿ ನಾಗರಾಜ್ ಮತ್ತು ಸ್ನೇಹಿತರು

ತೀರ್ಥಹಳ್ಳಿ : ಪಟ್ಟಣದ ಕೋಳಿಕಾಲ್ಗುಡ್ಡ ಶ್ರೀನಾಥ್ ಅವರ ತಾಯಿ ಅವರಿಗೆ ಹೃದಯಘಾತ ಆಗಿತ್ತು. ಆರ್ಥಿಕವಾಗಿ ಕಷ್ಟದಲ್ಲಿರುವ ಶ್ರೀನಾಥ್ ದಂಪತಿಗಳು ಕುರುವಳ್ಳಿ ನಾಗರಾಜ್ ಅವರನ್ನು ಸಂಪರ್ಕಿಸಿ ಶಿವಮೊಗ್ಗ ನಾರಾಯಣ ಹೃದಯಲಯದಿಂದ ಮಂಗಳೂರಿಗೆ ತಾಯಿಯವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿಕೊಡಿ ಎಂದು ಕೇಳಿಕೊಂಡಿದ್ದರು. ಮಧ್ಯರಾತ್ರಿಯಲಿ 14 ಸಾವಿರ ರೂಗಳ ಅಂಬುಲೆನ್ಸ್ ವ್ಯವಸ್ಥೆ ಮಾಡಿ ಮತ್ತು ಅವರ ಸೋಶಿಯಲ್ ಮೀಡಿಯಾ ಮೂಲಕ ಫೋನ್ ಪೇಯಲ್ಲಿ ಹಣ ನೀಡಿ ಈ ಕುಟುಂಬಕ್ಕೆ ನೆರವಾಗಿ ಎಂದು ಕುರುವಳ್ಳಿ ನಾಗರಾಜ್ ಮನವಿ ಮಾಡಿಕೊಂಡಿದ್ದರು.

ತೀರ್ಥಹಳ್ಳಿಯ ಒಳ್ಳೆಯ ಮನಸ್ಸಿನ ದಾನಿಗಳು ಕೊಟ್ಟ ಹಣವನ್ನ ಜೊತೆಗೆ  ಎ.ಪಿ ರಸ್ತೆಯ ಸುನ್ನಿ ಜಾಮಿಯಾ ಮಸೀದಿ ಸಮಿತಿಯವರರು ಸಂಗ್ರಹಿಸಿ ನೀಡಿದ ಹಣವನ್ನು ಇಂದು ಅವರ ಮನೆಗೆ ತೆರಳಿ ಆ ಕುಟುಂಬಕ್ಕೆ ನೀಡಿದರು 

ಈ ಸಂಧರ್ದಲ್ಲಿ ಶ್ರೀಕಾಂತ್ ಕುರುವಳ್ಳಿ ನಾಗೇಶ್ ಬೆಟ್ಟಮಕ್ಕಿ ಮಹೇಶ್ ಬೆಟ್ಟಮಕ್ಕಿ ಅಂಜನ್ ಹೆಗ್ಡೆ ಚಿಟ್ಟೆಬೈಲು,  ಈ ಒಂದು ಕೆಲಸಕ್ಕೆ ಕೈಜೋಡಿಸಿದ ಎಲ್ಲಾ ದಾನಿಗಳಿಗೂ ಕೂಡ ತೀರ್ಥಹಳ್ಳಿ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷರಾದ ಕುರುವಳ್ಳಿ ನಾಗರಾಜ್ ಈ ಮೂಲಕ ಕೃತಜ್ಞತೆಗಳನ್ನು ತಿಳಿಸಿದ್ದಾರೆ
Previous Post Next Post