ತಹಸೀಲ್ದಾರ್ ರನ್ನು ಹೆದರಿಸಿ ಇಟ್ಟುಕೊಂಡರೆ ತಮ್ಮ ಕೆಲಸ ಸುಲಭವಾಗಿ ಆಗುತ್ತದೆ ಎಂದು ಹಾಗೆ ಮಾಡಿದ್ದಾರೆ - ಕಿಮ್ಮನೆ ರತ್ನಾಕರ್
ತೀರ್ಥಹಳ್ಳಿ: ಸಿದ್ದರಾಮಯ್ಯನವರು ಜನಪರ ಕೆಲಸಗಳನ್ನು ಮುಂದುವರೆಸಲಿ, ಆರ್ಥಿಕತೆ ವಿಚಾರದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಲಿ, ಹಸಿವನ್ನು ನೀಗಿಸುವ ಕೆಲಸವೂ ಆಗಿದೆ. ಆರ್ಥಿಕತೆಯಲ್ಲಿ ದೇಶದಲ್ಲೇ ನಂಬರ್ 1 ಸ್ಥಾನದಲ್ಲಿ ಕರ್ನಾಟಕ ರಾಜ್ಯ ಇದೆ. ಹೀಗಾಗಿ ಅವರ ಮುಂದಿನ ಆಡಳಿತ ಜನಪರವಾಗಿರಲಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿದರು.
ಬುಧವಾರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಮಾತನಾಡಿ ರಥದ ಚಕ್ರ ವಿಚಾರದಲ್ಲಿ ಶಾಸಕರು ಕಂಪ್ಲೇಂಟ್ ಕೊಟ್ರು, ಅದು ಕೆಲಸ ನಿಂತಿತು, ಮುಂದೆ ಏನು ಮಾಡಬೇಕು ಎಂಬುದು ಶಾಸಕರಿಗೆ ತಿಳಿದಿಲ್ವಾ? ನಾನು ಆಗ ಅಮೇರಿಕಾದಲ್ಲಿ ಇದ್ದೆ, ನಾವು ಮಾಡದೇ ಇದ್ದರೆ ಸರ್ಕಾರದ ಮೇಲೆ ನಮ್ಮ ಮೇಲೆ ಆಪಾದನೆ ಬರುತ್ತದೆ ಎಂದು ಸಾಲ ಮಾಡಿ ರಥದ ಚಕ್ರ ಮಾಡಲು ಹೇಳಿದ್ದೆವು. ಆಪಾದನೆ ಮಾಡುವುದು ಮಾತ್ರ ಶಾಸಕರ ಕೆಲಸವೇ? ಚುನಾವಣೆ ಹಿಂದಿನ ದಿನ ಹಣ ಹಂಚಿ ಗೆದ್ದರೆ ಸಾಕು ಎನ್ನುವುದು ಮಾತ್ರ ಅವರು ಅಂದುಕೊಂಡಿದ್ದಾರೆ ಆಮೇಲೆ ಆಗುವ ಸಾಮಾಜಿಕ ಕೆಲಸದ ಬಗ್ಗೆ ಹೇಳುವುದು ಯಾರು? ಎಂದು ಪ್ರೆಶ್ನೆ ಮಾಡಿದರು.
ಇತ್ತೀಚಿಗೆ ಶಾಸಕರು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ. ಅದು ಬೇಜವಾಬ್ದಾರಿ ವ್ಯಕ್ತಿ ಮಾಡುವ ಕೆಲಸ. ಒಬ್ಬ ಅಧಿಕಾರಿಯ ಎದುರು ಆಫೀಸ್ ಸಮಯದಲ್ಲಿ ಪ್ರತಿಭಟನೆ ಮಾಡುವುದು ಕಾನೂನು ಬಾಹಿರ, 5 ಸಾರಿ ಗೆದ್ದಿರುವ ವ್ಯಕ್ತಿಗೆ ತಪ್ಪು ಎನ್ನುವುದು ಗೊತ್ತಿಲ್ಲವೇ? ತಹಸೀಲ್ದಾರ್ ರನ್ನು ಹೆದರಿಸಿ ಇಟ್ಟುಕೊಂಡರೆ ತಮ್ಮ ಕೆಲಸ ಸುಲಭವಾಗಿ ಆಗುತ್ತದೆ ಎಂದು ಹಾಗೆ ಮಾಡಿದ್ದಾರೆ. ಜಾಗದ ವಿಚಾರದಲ್ಲಿ ಇಬ್ಬರನ್ನು ಕರೆದು ಪಂಚಾಯ್ತಿ ಮಾಡಿ ಸರಿಪಡಿಸುವುದನ್ನು ಬಿಟ್ಟು ಪ್ರತಿಭಟನೆ ಮಾಡುತ್ತಾರೆ. ಕೆಳಕೆರೆ ದಿವಾಕರ್ ಅವರಿಗೆ ಸಪೋರ್ಟ್ ಮಾಡಿದ್ದಾರೆ ಎಂಬ ಕಾರಣಕ್ಕೆ ಇವರ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ, ಜ್ಞಾನೇಂದ್ರ ಅವರ ವಿರುದ್ಧ ಸದ್ಯದಲ್ಲೇ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿದರು.
ಈ ವೇಳೆ ಗುಡ್ಡೆಕೊಪ್ಪ ಗ್ರಾಮಪಂಚಾಯಿತಿಯ ನಾಲ್ಕು ಮಂದಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಆರ್ ಎಂ ಮಂಜುನಾಥ್ ಗೌಡ, ಕೆಸ್ತೂರು ಮಂಜುನಾಥ್, ರತ್ನಾಕರ್ ಶೆಟ್ಟಿ, ಗೀತಾ ರಮೇಶ್, ಹೊಸ್ಕೆರೆ ರವೀಶ್, ಕಟ್ಟೆಹಕ್ಲು ಕಿರಣ್, ಮಂಜುಳಾ ನಾಗೇಂದ್ರ, ಶಬನಮ್, ಅಮರಾನಾಥ್ ಶೆಟ್ಟಿ, ಹಾರೋಗೋಳಿಗೆ ಪದ್ಭಾನಾಬ್, ಸೇರಿ ಹಲವರು ಉಪಸ್ಥಿತರಿದ್ದರು.
Tags:
ಕಿಮ್ಮನೆ ರತ್ನಾಕರ್