ಕಲ್ಲಾರೆ ಗಣಪತಿ ದೇವಸ್ಥಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ವಿಶೇಷ ಪೂಜೆ kallare Ganapati

ಕಲ್ಲಾರೆ ಗಣಪತಿ ದೇವಸ್ಥಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ವಿಶೇಷ ಪೂಜೆ

ಇಂದು ಸಂಜೆ ಶೃಂಗೇರಿ ಶ್ರೀಗಳ ಭೇಟಿ - ಗುರುವಾರ ಸಂಜೆ ರಥೋತ್ಸವ

ತೀರ್ಥಹಳ್ಳಿ : ಪಟ್ಟಣದ ಗಾಂಧಿಚೌಕದಲ್ಲಿರುವ ಕಲ್ಲಾರೆ ಗಣಪತಿ ದೇವಸ್ಥಾನದಲ್ಲಿ ಇಂದಿನಿಂದ ಮೂರು ದಿನಗಳ ಪರ್ಯಂತ ವಿಶೇಷ ಪೂಜೆ ನಡೆಯಲಿದ್ದು ಇಂದು ಸಂಜೆ 4 ಗಂಟೆಗೆ ಶೃಂಗೇರಿ ಶ್ರೀಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆಗಮಿಸಲಿದ್ದಾರೆ.

ಗಣಪತಿ ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ಈ ವಿಶೇಷ ಕಾರ್ಯಕ್ರಮ ಮೂರು ದಿನಗಳ ಪರ್ಯಂತ ನಡೆಯಲಿದೆ. ಇಂದು ಸಂಜೆ 7 ಗಂಟೆಗೆ ರಂಗಪೂಜೆ ನಡೆಯಲಿದೆ. 

ನಾಳೆ ಬುಧವಾರ ಬೆಳಗ್ಗೆ ಮಂಡಲ ರಚನೆ, ಪರಶುರಾಮತೀರ್ಥಪೂಜಾಪೂರ್ವಕ ಆಗ್ರೋದಕ  ಆನಯನ, ಕಲಶ ಸ್ಥಾಪನೆ, ತತ್ವಾಧಿವಾಸಹೋಮ, ಕಲಶಾಭಿಷೇಕ, ಬ್ರಹ್ಮ ಕುಂಭಾಭಿಷೇಕ, ಮಹಾ ಪೂಜೆ ಪ್ರಸಾದ ವಿನಿಯೋಗ ಹಾಗೂ ಸಂಜೆ 4:30 ಕ್ಕೆ ರಂಗಪೂಜೆ, 5:30 ಕ್ಕೆ ಪುರೋತ್ಸವ ನಡೆಯಲಿದೆ.

22-1-26 ರ ಗುರುವಾರ ಬೆಳಗ್ಗೆ ವಿಶೇಷ ಪೂಜೆ, ಸಹಸ್ರ ಮೋದಕ ಗಣಹೋಮ ಮಧ್ಯಾಹ್ನ 12 ಗಂಟೆಗೆ ಪೂರ್ಣಹುತಿ ಮಹಾಪೂಜೆ, ಪ್ರಸಾದ ವಿನಿಯೋಗ ಸಂಜೆ 6:30 ಕ್ಕೆ ಪ್ರದೋಷ ಕಾಲದಲ್ಲಿ ರಥೋತ್ಸವ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವರ ಕೃಪೆಗೆ ಪಾತ್ರರಾಗಲು ದೇವಸ್ಥಾನದ ಸಮಿತಿಯವರು ತಿಳಿಸಿದ್ದಾರೆ.
Previous Post Next Post