ಬಿಗ್ ಬಾಸ್ ಕಿರೀಟ ಗಿಲ್ಲಿ ನಟನ ಪಾಲು - ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ರಕ್ಷಿತಾ ಶೆಟ್ಟಿ Bigg Boss

ಬಿಗ್ ಬಾಸ್  ಕಿರೀಟ  ಗಿಲ್ಲಿ ನಟನ ಪಾಲು - ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ರಕ್ಷಿತಾ ಶೆಟ್ಟಿ
ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಕಡೆಗೂ ಮುಕ್ತಾಯಗೊಂಡಿದೆ. ಭಾರಿ ಕುತೂಹಲ ಮೂಡಿಸಿದ್ದ ವಿನ್ನರ್ ಪಟ್ಟಕ್ಕೆ ಕಡೆಗೂ ಉತ್ತರ ಸಿಕ್ಕಿದೆ. ಮಂಡ್ಯದ ಹಳ್ಳಿ ಹುಡುಗ ಕರ್ನಾಟಕದ ಗಲ್ಲಿ ಗಲ್ಲಿಯಲ್ಲೂ ಹೆಸರು ಮಾಡಿ ಕಡೆಗೂ ಗೆಲುವನ್ನು ಪಡೆದಿದ್ದಾನೆ. ಹೌದು ಗಿಲ್ಲಿ ನಟನ ಪಾಲಾಗಿದೆ. ರನ್ನರ್ ಅಪ್ ಸ್ಥಾನಕ್ಕೆ ರಕ್ಷಿತಾ ಶೆಟ್ಟಿ ತೃಪ್ತಿಪಟ್ಟಿದ್ದಾರೆ. ಟಾಪ್‌ 6 ಸ್ಥಾನದಲ್ಲಿ ರಘು, ಅಶ್ವಿನಿ ಗೌಡ, ಕಾವ್ಯ ಶೈವ, ಗಿಲ್ಲಿ ನಟ, ಧನುಷ್‌ ಗೌಡ, ರಕ್ಷಿತಾ ಶೆಟ್ಟಿ ಇದ್ದರು.

ಟಾಸ್ಕ್ ಮಾಸ್ಟರ್ ಮೊದಲು ಔಟ್
ಮನೆಯಿಂದ ಮೊದಲು ಧನುಷ್ ಗೌಡ ಎಲಿಮಿನೇಟ್‌ ಆದರು. ಟಾಸ್ಕ್‌ ಮಾಸ್ಟರ್‌ ಎಂದೇ ಹೆಸರು ಪಡೆದಿದ್ದರು. ಆರಂಭದಿಂದ ಇಲ್ಲಿಯವರೆಗೆ ಹೋಲಿಕೆ ಮಾಡಿದರೆ ಈಗಲೇ ಧನುಷ್‌ ಹೆಚ್ಚಾಗಿ ಕಾಣಿಸಿದ್ದು. ಈ ಕಾರಣವೇ ಗೆಲುವಿಗೆ ಮುಳುವಾಗಿರಬಹುದು.

ಕ್ಯಾಪ್ಟನ್ ರಘುಗೆ 5 ನೇ ಸ್ಥಾನ
ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟು ಮನೆಯಿಂದ ರಘು ಅವರು ಹೊರ ಬಂದರು. ಕ್ಯಾಪ್ಟನ್ ರಘು ಎಂದೇ ಖ್ಯಾತಿ ಪಡೆದಿದ್ದು ಜನರ ಮನಸ್ಸಿನಲ್ಲಿ ಹೆಸರು ಮಾಡಿದ್ದರು. ಮನೆಯಲ್ಲಿ ಅಡಿಗೆ ಮೂಲಕವೇ ಇವರು ಹೆಸರು ಮಾಡಿದ್ದರು. ಆದರೆ ಗೆಲುವು ಇವರದ್ದು ಆಗಿಲ್ಲ.

ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟ ಕಾವ್ಯ
ನಾಲ್ಕನೇ ಸ್ಥಾನದಿಂದ ಕಾವ್ಯ ಅವರು ಹೊರ ಬಂದರು. ಕಾವ್ಯ ಅವರ ಮನೆಯವರು ಬಂದು, ಹೊರಗಡೆ ವಿಷಯವನ್ನು ಹೇಳಿದಾಗಲೇ ಕಾವ್ಯ ಶೈವ ಅವರು ಔಟ್‌ ಆಗಬೇಕಿತ್ತು, ಇನ್ನೂ ಯಾಕೆ ಇದ್ದಾರೆ ಎಂದು ಕಿಚ್ಚ ಸುದೀಪ್‌ ಅವರು ವೇದಿಕೆಯಲ್ಲಿ ಹೇಳಿಕೊಂಡು ಆಶ್ಚರ್ಯಪಟ್ಟಿದ್ದಿದೆ. ಗಿಲ್ಲಿ ಅವರಿಂದ ಕಾವ್ಯ ಕಾಣಿಸಿಕೊಂಡಿದ್ದಾರೆ ಎಂಬ ಮಾತು ಜಾಸ್ತಿ ಬಂದಿತ್ತು. ಆದರೆ ಕಾವ್ಯ ಹಾಗೂ ಗಿಲ್ಲಿ ಅವರ ಸ್ನೇಹ ಹಾಗೂ ಆ ಜೋಡಿ ಜನಪ್ರಿಯತೆ ಪಡೆದಿತ್ತು. ಕಾವ್ಯ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಎರಡನೇ ರನ್ನರ್ ಅಪ್
ಬಿಗ್‌ ಬಾಸ್‌ ಮನೆಯಲ್ಲಿ ಜಗಳ, ಟಾಸ್ಕ್‌ ಎಲ್ಲದರಲ್ಲಿಯೂ ಸೈ ಎನಿಸಿಕೊಂಡಿದ್ದ ಅಶ್ವಿನಿ ಗೌಡ ಆರಂಭದಲ್ಲಿ ಅವರ ಆಟ, ನಡೆ,ನುಡಿ ಎಲ್ಲವೂ ನಕಾರಾತ್ಮಕ ಪ್ರತಿಕ್ರಿಯೆ ಪಡೆದಿತ್ತು. ಇವರು ಮಹಿಳಾಮಣಿಯಾಗಿ ಸಖತ್‌ ಆಗಿ ಆಟ ಆಡಿದರು, ಆಮೇಲೆ ಅವರ ವರ್ತನೆ ಬೇರೆಯದೇ ಆಯಿತು. ಅವರು ಜಗಳ ಮಾಡಿ ಫೇಮಸ್ ಆಗಿದ್ದರು. ಅದರಲ್ಲೂ ಇವರ ಗೆಲುವಿಗೆ ಹಲವು ವಿರೋಧ ಕೂಡ ಇತ್ತು.  ಕಡೆಗೆ ಮೂರನೇ ಸ್ಥಾನ ಪಡೆದರು.

ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟ ಟಗರು ಪುಟ್ಟಿ
ಮಂಗಳೂರು ಮೂಲದ ಬಿಗ್ ಬಾಸ್ ಮನೆಯಲ್ಲಿ ಟಗರು ಪುಟ್ಟಿ ಎಂದೇ ಪ್ರಖ್ಯಾತಿಯನ್ನು ರಕ್ಷಿತಾ ಶೆಟ್ಟಿ ಪಡೆದಿದ್ದರು. ಪಟಾಕಿ ಪೋರಿ ಎಂದೇ ಜನಮನ್ನಣೆ ಪಡೆದಿದ್ದ ಇವರು ವಿನ್ನರ್ ಪಟ್ಟಕ್ಕೆ ಅರ್ಹತೆ ಕೂಡ ಪಡೆದಿದ್ದರು. ಆದರೆ ಜನರ ಮತಗಳಿಂದ ಸ್ವಲ್ಪ ಮಟ್ಟಿಗೆ ಎಡವಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಗಲ್ಲಿ ಗಲ್ಲಿಯಲ್ಲೂ ಗಿಲ್ಲಿ ಗಿಲ್ಲಿ
ಬಿಗ್ ಬಾಸ್ ಮನೆಗೆ ಎಂಟ್ರಿ ಅದಾಗಲೇ ವಿನ್ನರ್ ಎಂಬ ಮಾತು ಕೇಳಿ ಬಂದಿತ್ತು. ಒನ್ ಮ್ಯಾನ್ ಆರ್ಮಿ ಎಂಬಂತೆ ಜನರನ್ನು ನಕ್ಕು ನಗಿಸಿ ಇಡೀ ಸೀಸನ್ ತಮ್ಮ ಮೇಲೆ ಹೊತ್ತುಕೊಂಡಿದ್ದ ಗಿಲ್ಲಿ ನಟ ಬಿಗ್ ಬಾಸ್ ಮಾತ್ರವಲ್ಲದೆ ಕಲರ್ಸ್ ಕನ್ನಡ ಕೂಡ ಮೊದಲ ಸ್ಥಾನದಲ್ಲಿ ಕೂರುವಂತೆ ಮಾಡಿದ್ದರು. ಟ್ಯಾಲೆಂಟ್ ಇರುವ ಹಳ್ಳಿ ಹೈದನ ಗೆಲುವಿಗೆ ಕರ್ನಾಟಕ ಕಾದು ಕುಳಿತಿತ್ತು. ಜನಬಲ ಹಾಗೆ ಹಣಬಲ ಎಂಬೆಲ್ಲ ಮಾತು ಕೇಳಿ ಬಂದಿದ್ದವು. ಆದರೆ ಜನಾಭಿಪ್ರಾಯವನ್ನೇ ಎತ್ತಿ ಹಿಡಿದ ಬಿಗ್ ಬಾಸ್ ತಂಡ ಗಿಲ್ಲಿ ನಟನನ್ನು ವಿನ್ನರ್ ಮಾಡಿದ್ದಾರೆ.

ಗೆದ್ದಂತಹ ಗಿಲ್ಲಿ ಅವರಿಗೆ 50 ಲಕ್ಷ ರೂಪಾಯಿ ಕ್ಯಾಶ್‌, ಒಂದು ಕಾರ್‌ ಸೇರಿದಂತೆ ಇನ್ನಿತರ ಬಹಮಾನಗಳ ಮಹಾಪೂರವೇ ಹರಿದು ಬರಲಿದೆ. ಕನ್ನಡ ಬಿಗ್ ಬಾಸ್ ವಿಜೇತರಿಗೆ ಟ್ರೋಫಿ  ಜೊತೆಗೆ ಸಾಯಿ ಗೋಲ್ಡ್ ಪ್ಯಾಲೇಸ್ ನ ಶರವಣ ಅವರಿಂದ 20 ಲಕ್ಷ ಹಣ ಕೂಡ ಸಿಕ್ಕಿದೆ. ಜನಪ್ರಿಯತೆ ಮತ್ತು ಅವಕಾಶಗಳು ಇನ್ನಷ್ಟು ಲಭಿಸಲಿ.

ಬಿಗ್ ಬಾಸ್ ಗೆ ಬಂದಿದ್ದ ಎಲ್ಲಾ ಕಲಾವಿದರಿಗೆ ಒಳ್ಳೊಳ್ಳೆ ಅವಕಾಶಗಳು ಸಿಗಲಿ ಎಂಬುದು ನಮ್ಮ ಹಾರೈಕೆ..
Previous Post Next Post