ತೀರ್ಥಹಳ್ಳಿಯ ತಹಸಿಲ್ದಾರ್ ರಂಜಿತ್ ವರ್ಗಾವಣೆ..!
ತೀರ್ಥಹಳ್ಳಿ : ತಾಲೂಕು ದಂಡಾಧಿಕಾರಿಗಳಾದ ರಂಜಿತ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ.
ಇತ್ತೀಚಿಗೆ ತಾಲೂಕು ಕಚೇರಿಯ ತಹಸೀಲ್ದಾರ್ ಕೊಠಡಿ ಎದುರು ಶಾಸಕ ಆರಗ ಜ್ಞಾನೇಂದ್ರ ಪ್ರತಿಭಟನೆ ಮಾಡಿದ್ದರು.
ಈ ಪ್ರಕರಣವೇ ವರ್ಗಾವಣೆಗೆ ಕಾರಣವಾಯಿತೇ? ಎಂಬ ಅನುಮಾನ ಸಹ ಮೂಡಿದೆ. ತಾಲೂಕು ಕಚೇರಿಯಲ್ಲಿ ಬೇಕಾಬಿಟ್ಟಿಯಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ಅದರಲ್ಲೂ 20 ವರ್ಷಗಳಿಂದ ತಮ್ಮದೇ ರಾಜ್ಯ ಭಾರ ಎಂದು ಆಡಳಿತ ನಡೆಸುತ್ತಿರುವವರನ್ನು ವರ್ಗಾವಣೆ ಮಾಡಲು ಆಗದೇ ತಹಸೀಲ್ದಾರ್ ವರ್ಗಾವಣೆ ಮಾಡಿರುವುದು ಹಾಸ್ಯಸ್ಪದ ಎಂಬ ಮಾತು ಸಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಕಳೆದ ಎರಡು ವರ್ಷಗಳಿಂದ ತೀರ್ಥಹಳ್ಳಿಯಲ್ಲಿ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸಿದ್ದ ರಂಜಿತ್ ಅವರು ಅದ್ಭುತವಾಗಿ ಕೆಲಸ ನಿರ್ವಹಿಸಿದ್ದರು. ಅವರನ್ನು ಈಗ ಶಿಕಾರಿಪುರಕ್ಕೆ ವರ್ಗಾವಣೆ ಮಾಡಲಾಗಿದೆ. ಆದರೆ ತೀರ್ಥಹಳ್ಳಿಗೆ ಇನ್ನು ಯಾವುದೇ ತಹಸೀಲ್ದಾರ್ ನೇಮಕ ಆಗಿಲ್ಲ..
Tags:
ತೀರ್ಥಹಳ್ಳಿ ಸುದ್ದಿ