ವಾಗ್ದೇವಿ ಪಿ.ಯು ಕಾಲೇಜಿನ ಪ್ರಣಮ್ಯ ಚಿತ್ರಕಲೆಯಲ್ಲಿ ರಾಜ್ಯಕ್ಕೆ ಪ್ರಥಮ
ತೀರ್ಥಹಳ್ಳಿ : ದಿನಾಂಕ 15.12.2025 ರಂದು ಕರ್ನಾಟಕ ರಾಜ್ಯ ಕ್ಷೇಮಾಭಿವೃದ್ಧಿ ನಿಧಿ,ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ತುಮಕೂರು ಇವರು ಆಯೋಜಿಸಿದ್ದ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಾಗ್ದೇವಿ ಪದವಿಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಎಂ ಪ್ರಣಮ್ಯ ಭಾಗವಹಿಸಿ ಚಿತ್ರಕಲೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದು ಓದುತ್ತಿರುವ ಕಾಲೇಜಿಗೆ,
ತಾಲ್ಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾಳೆ.
ಈ ವಿದ್ಯಾರ್ಥಿನಿಯು ಹುಗಳವಳ್ಳಿ ಗ್ರಾಮದ ಆರ್ ಲಲಿತಾ ಹಾಗೂ ಹೆಚ್.ವಿ. ಮಂಜುನಾಥ್ ದಂಪತಿಗಳ ಪುತ್ರಿಯಾಗಿದ್ದಾಳೆ. ವ್ಯಾಸಂಗದಲ್ಲಿಯೂ ಅತ್ಯಂತ ಪ್ರತಿಭಾನ್ವಿತೆಯಾದ ಈಕೆ ಬಾಲ್ಯದಿಂದಲೂ ಚಿತ್ರಕಲೆಯನ್ನು ಅಭ್ಯಾಸಮಾಡುತ್ತಾ ಬಂದಿರುತ್ತಾಳೆ. ಇವಳ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಉಪನ್ಯಾಸಕ ವೃಂದ ಮತ್ತು ಪೋಷಕರು ಹಾಗೂ ಸಮಸ್ತ ತೀರ್ಥಹಳ್ಳಿ ಜನತೆ
ಅಭಿನಂದಿಸಿರುತ್ತಾರೆ.
Tags:
ವಾಗ್ದೇವಿ ಸಂಸ್ಥೆ