"Best School of Karnataka Award” ಪಡೆದ ಬೆಟ್ಟಮಕ್ಕಿಯ ಸಹ್ಯಾದ್ರಿ ಐಸಿಎಸ್'ಸಿ ಶಾಲೆ
ತೀರ್ಥಹಳ್ಳಿ : ದಿನಾಂಕ 10, 11 ಮತ್ತು 12 ನೇ December 2025 ರಂದು ಮುಂಬೈನ NESCO ದ ESFE ಮತ್ತು The Times Of India ಇವರ ಸಹಯೋಗತ್ವದಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ Star Education Awards - 2025 ಇವರಿಂದ ತೀರ್ಥಹಳ್ಳಿ ತಾಲ್ಲೂಕು ಒಕ್ಕಅಗರ ಸಂಘದ ಆಶ್ರಯದಲ್ಲಿ
ನಡೆಯುತ್ತಿರುವ ಸಹ್ಯಾದ್ರಿ ICSE ಶಾಲೆಗೆ “Best School of Karnataka “-(Under Rural category) ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ.
ಈ ಮೂರು ದಿನಗಳಲ್ಲಿ ನಡೆದ ರಾಷ್ಟ್ರ ಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ರಾಷ್ಟ್ರದ ಪ್ರಮುಖ ಶಿಕ್ಷಣ ತಜ್ಞರು ಪಾಲ್ಗೊಂಡಿದ್ದರು. ಇಂತಹ ರಾಷ್ಟ್ರ ಮಟ್ಟದ ವೇದಿಕೆಯಲ್ಲಿ
ತೀರ್ಥಹಳ್ಳಿಯ ಗ್ರಾಮೀಣ ವ್ಯಾಪ್ತಿಗೆ ಸೇರಿರುವ ಸಹ್ಯಾದ್ರಿ ಶಾಲೆಯ ವಿವಿಧ ಕ್ಷೇತ್ರಗಳ ಪ್ರಗತಿಯನ್ನು ಗುರುತಿಸಿ ಈ ಒಂದು ಪ್ರಶಸ್ತಿಯನ್ನು ನೀಡಿರುವುದು ಹೆಮ್ಮೆಯ
ವಿಷಯವಾಗಿರುತ್ತದೆ.
ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘವು ಬಹಳ ಹಿಂದಿನಿಂದಲೂ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾಗಿ 2008 ರ ಜೂನ್ನಲ್ಲಿ ತೀರ್ಥಹಳ್ಳಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಭವಿಷ್ಯಕ್ಕಾಗಿ ಜಾಗತಿಕ ಮಟ್ಟದ ICSE ಪಠ್ಯಕ್ರಮದ ಶಿಕ್ಷಣವನ್ನು ನೀಡಲು ಸಹ್ಯಾದ್ರಿ ICSE ಶಾಲೆಯನ್ನು ಪ್ರಾರಂಭಿಸಲಾಯಿತು.
ಶೇ. 90 ರಷ್ಟು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆಯು 10ನೇ ತರಗತಿಯ ICSE ಬೋರ್ಡ್ ಪರೀಕ್ಷೆಯನ್ನು ಪ್ರಥಮವಾಗಿ 2014 ರಲ್ಲಿ
ಎದುರಿಸಿ ಶೇಕಡ 100 ಫಲಿತಾಂಶದ ಯಶಸ್ಸಿನೊಂದಿಗೆ ನಿರಂತರ 13 ವರ್ಷಗಳಿಂದ ಶೇ.100 ಫಲಿತಾಂಶವನ್ನು ನೀಡುತ್ತಾ ತನ್ನದೇ ಆದ ಶೈಕ್ಷಣಿಕ ದಾಖಲೆಯನ್ನು
ನಿರ್ಮಿಸಿರುವುದು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ.
ICSE ಬೋರ್ಡ್ ಪರೀಕ್ಷೆಯಲ್ಲಿ ಶೇ98 ಫಅತಾಂಶ ದಾಖಲಿಸಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ಕಳೆದ ಮಾರ್ಚ್ನಲ್ಲಿ ನಡೆದ ದ್ವಿತೀಯ PUC ವಿಜ್ಞಾನ ವಿಭಾಗದ
ಪರೀಕ್ಷೆಯಲ್ಲಿ ರಾಜ್ಯದಲ್ಲಿ ಮೊಟ್ಟ ಮೊದಲ ಬಾಲಿಗೆ 600 ಕ್ಕೆ 600 ಅಂಕ ಗಳಿಸಿ ಮೊದಲ ರ್ಯಂಕ್ ಪಡೆದ ವಿದ್ಯಾರ್ಥಿನಿಯನ್ನು ಈ ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ ಹಿರಿಮೆ ಈ ಶಿಕ್ಷಣ ಸಂಸ್ಥೆಗೆ ಸಲ್ಲುತ್ತದೆ.
ಅಷ್ಟೇ ಅಲ್ಲದೆ ಕ್ರೀಡಾ ಕ್ಷೇತ್ರದಲ್ಲಿ ಆರಂಭದಿಂದ ನಿರಂತರವಾಗಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪ್ರತೀ ವರ್ಷವೂ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಸುವ ಮೂಲಕ ದೇಶದ ಬೇರೆ ಬೇರೆ ಭಾಗಗಳಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುತ್ತಿರುವುದು ಸಂಸ್ಥೆಯ ಮತ್ತೊಂದು ಹೆಗ್ಗಳಿಕೆಯಾಗಿದೆ.
ಹಾಗೆಯೇ ಸಹಪಠ್ಯ ಚಟುವಟಿಕೆಗಳಾದ ಸಂಗೀತ, ಚೆಸ್, ಚಿತ್ರಕಲೆ, ಅಬಾಕಸ್, ಕರಾಟೆ, ಸ್ನೇಟಿಂಗ್ ಇತ್ಯಾಧಿ ಕ್ಷೇತ್ರಗಳಲ್ಲಿಯೂ ರಾಷ್ಟ್ರ ಮಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳು
ನಿರಂತರವಾಗಿ ದಾಖಲೆಯನ್ನು ಮಾಡುತ್ತಿದ್ದಾರೆ.
ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಪಾಂಕದ ಸೌಲಭ್ಯ ದೊರೆಯುತ್ತಿದ್ದು, ಇದು CET/NEET ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಹಾಯಕವಾಗುತ್ತಿದೆ. ತಾಲ್ಲೂಕಿನ ಮೂಲೆ-ಮೂಲೆಗಳ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಶಿಕ್ಷಣದಿಂದ
ವಂಚಿತರಾಗಬಾರದೆಂಬ ಹೆಬ್ಬಯಕೆಯಿಂದ ರಾಜ್ಯದಲ್ಲಿಯೇ ಅತೀ ಕಡಿಮೆ ಶುಲ್ಕದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದು ಈ ಸಂಸ್ಥೆಯ ಮತ್ತೊಂದು
ವಿಶೇಷತೆಯಾಗಿರುತ್ತದೆ.
ಶಿಕ್ಷಣ ಸಂಸ್ಥೆಯು ಸುಂದರವಾದ ಪ್ರಕೃತಿ ಮಡಿಲಿನಲ್ಲಿ ನಿಶ್ಯಬ್ಧವಾದ ವಾತಾವರಣವನ್ನೊಳಗೊಂಡು ವಿಶಾಲವಾದ ಆಟದ ಮೈದಾನ, ತಾಲ್ಲೂಕಿನಾದ್ಯಂತ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಶಾಲಾ ಬಸ್ಸಿನ ವ್ಯವಸ್ಥೆ, ಸುಸಜ್ಜಿತವಾದ ತರಗತಿ ಕೊಠಡಿಗಳು ಮತ್ತು ಉತ್ತಮ ಬೋದಕ ವೃಂದವನ್ನು ಒಳಗೊಂಡಿದೆ.
ಮೇಲ್ಕಂಡ ಸಮಗ್ರ ವಿಷಯಗಳನ್ನು ಪರಿಗಣಿಸಿ ಈ ಒಂದು ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತಾರೆ. ಸುಮಾರು 2500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದು ತನ್ನದೇ ಆದ ಮೈಲಿಗಲ್ಲುಗಳನ್ನು ನಿರ್ಮಿಸುತ್ತಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ.
Tags:
ಸಹ್ಯಾದ್ರಿ ಸಂಸ್ಥೆ