ಎಳ್ಳಮಾವಾಸ್ಯೆ ಪ್ರಯುಕ್ತ ಪಟ್ಟಣ ಪಂಚಾಯತ್ ನೇತೃತ್ವದಲ್ಲಿ ಸ್ವಚ್ಛತಾ ಆಂದೋಲನ - ಹಲವಾರು ಸಂಘ ಸಂಸ್ಥೆಗಳು ಭಾಗಿ tth

ಎಳ್ಳಮಾವಾಸ್ಯೆ ಪ್ರಯುಕ್ತ ಪಟ್ಟಣ ಪಂಚಾಯತ್ ನೇತೃತ್ವದಲ್ಲಿ ಸ್ವಚ್ಛತಾ ಆಂದೋಲನ - ಹಲವಾರು ಸಂಘ ಸಂಸ್ಥೆಗಳು ಭಾಗಿ 

ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಅಂಗವಾಗಿ ಪಟ್ಟಣ ಪಂಚಾಯತ್ ನೇತೃತ್ವದಲ್ಲಿ ಹಲವಾರು ಸಂಘ ಸಂಸ್ಥೆಗಳ ವತಿಯಿಂದ ತುಂಗಾ ನದಿ ತೀರದಲ್ಲಿ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು.

ಮೂರು ದಿನಗಳ ಪರ್ಯಂತ ನಡೆಯುವ ಅದ್ದೂರಿ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಲಿದ್ದು ಈ ಕಾರಣದಿಂದ ತುಂಗಾ ನದಿ ತೀರದ ದಡವನ್ನ ಸ್ವಚ್ಛವಾಗಿ ಇರಿಸುವ ಸಲುವಾಗಿ ಹಲವಾರು ಸಂಘ ಸಂಸ್ಥೆಗಳ ಜೊತೆಗೆ ಸೇರಿ ಪಟ್ಟಣ ಪಂಚಾಯತ್ ನೇತೃತ್ವದಲ್ಲಿ ಸ್ವಚ್ಛತಾ ಆಂದೋಲನವನ್ನು ನಡೆಸಲಾಯಿತು.

ಪಟ್ಟಣ ಪಂಚಾಯತ್ ಪ್ರಭಾರ ಅಧ್ಯಕ್ಷರಾದ ಗೀತಾ ರಮೇಶ್ ಅವರ ನೇತೃತ್ವದಲ್ಲಿ ನಡೆದಂತಹ ಈ ಸ್ವಚ್ಛತಾ ಆಂದೋಲನದಲ್ಲಿ ಜಾತ್ರಾ ಸಮಿತಿ, ಯೋಗ ಸಮಿತಿ, ವರ್ತಕರ ಸಂಘ, ಎಸ್ ಎನ್ ಜಿ ವಿಸಂಘ, ಮೊಘವೀರ ಸಮುದಾಯ ಸಂಘ, ರೋಟರಿ, ಲಯನ್ಸ್, ಜೆಸಿಐ, ಪಟ್ಟಣ ಪಂಚಾಯತ್ ಸದಸ್ಯರು, ನಾಮನಿರ್ದೇಷಿತ ಸದಸ್ಯರು, ಮುಖ್ಯಾಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಸೇರಿದಂತೆ ಪಟ್ಟಣ ಪಂಚಾಯತ್ ನ ಕಾರ್ಮಿಕರು ಈ ಸ್ವಚ್ಛತಾ ಆಂದೋಲನದಲ್ಲಿ ಭಾಗಿಯಾಗಿದ್ದರು..
  
Previous Post Next Post