ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಹೊರೆಕಾಣಿಕೆಗಾಗಿ ಇಂದು ವಾಹನ ಸಂಚರಿಸುವ ಮಾರ್ಗಗಳು ಯಾವುದು..!?
ತೀರ್ಥಹಳ್ಳಿ : ಶ್ರೀ ರಾಮೇಶ್ವರ ಅನ್ನದಾಸೋಹ ಮಿತ್ರವೃಂದದ ವತಿಯಿಂದ ಸತತವಾಗಿ ಹದಿನೈದು ವರ್ಷಗಳಿಂದ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಅನ್ನಸಂತರ್ಪಣೆ ನಡೆಯುತ್ತಿದ್ದು ಈ ಬಾರಿ ಒಟ್ಟು ಏಳು ದಿನಗಳ ಪರ್ಯಂತ ಅನ್ನಸಂತರ್ಪಣೆ ನಡೆಯಲಿದೆ. ಅನ್ನದಾಸೋಹಕ್ಕೆ ತಾಲೂಕಿನ ಎಲ್ಲಾ ಸದ್ಭಕ್ತರು ಪಾಲ್ಗೊಳ್ಳಲು ತಿಳಿಸಲಾಗಿದೆ. ಹಾಗೆ ರಾಮೇಶ್ವರ ದೇವಸ್ಥಾನ ವತಿಯಿಂದ ಹೊರಕಾಣಿಕೆ ವಾಹನ ಗುರುವಾರದಿಂದ ಹೊರಟಿದೆ.
ಇಂದು (16-12-25) ರಂದು ಹೆಗ್ಗೆಬೈಲು, ವಿಠಲನಗರ, ಗೆರಸ, ಬಿಲಗ, ಬಿಳಿಗೆರೆ, ಹುಣಸವಳ್ಳಿ, ಮುನ್ನೂರು, ಕಮಕಾರು, ಹೊಸಕೊಪ್ಪ, ಹೊನ್ನಾನಿ, ಹುಲಿಗುದ್ದು, ಬಾಲನಕೊಡಿಗೆ, ತಳುವೆ, ತಿರಳೆಬೈಲು, ಮೇಲಿನಕುರುವಳ್ಳಿ, ಮಾನಿ, ಸೋಮೇಶ್ವರ, ಕುಂಬಾರದಡಿಗೆ, ಕುರುವಳ್ಳಿ, ಬೊಮ್ಮರಸಯ್ಯನ ಅಗ್ರಹಾರ, ಹೆನ್ನಂಗಿ, ಛತ್ರಕೇರಿ, ರಥಬೀದಿ, ಮಿಲ್ಕೇರಿ ಹಾಗು ಇತರೆ ಎಲ್ಲಾ ಭಾಗಗಳಲ್ಲೂ ಹಸಿರು ಹೊರೆಕಾಣಿಕೆ ಸಂಗ್ರಹಣೆ ಮಾಡಲಿದೆ.
ಸದ್ಭಕ್ತರು ತಮ್ಮ ಮನೆಯಲ್ಲಿ ಬೆಳೆದ ದವಸ ಧಾನ್ಯ ತರಕಾರಿ
ಅಕ್ಕಿ, ಕಾಯಿ ಇನ್ನಿತರ ವಸ್ತುಗಳನ್ನು ಹಸಿರು ಹೊರೆ ಕಾಣಿ
ರೂಪದಲ್ಲಿ ಕೊಡುವುದರ ಮೂಲಕ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅನ್ನ ದಾಸೋಹ ಮಿತ್ರ ವೃಂದಸಮಿತಿಯವರು ವಿನಂತಿಸಿದ್ದಾರೆ.
Tags:
ಜಾತ್ರೆ ಸುದ್ದಿ