ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ಸಾವು..!
ತೀರ್ಥಹಳ್ಳಿ : ಎಳ್ಳಮಾವಾಸ್ಯೆ ಜಾತ್ರೆಯ ಕೆಲಸಕ್ಕಾಗಿ ಬಂದಿದ್ದ ಯುವಕನೋರ್ವ ನೀರಲ್ಲಿ ಈಜಲು ಹೋಗಿ ನೀರುಪಾಲು ಆದ ಘಟನೆ ರಾಮೇಶ್ವರ ದೇವಸ್ಥಾನ ಹಿಂಭಾಗ ನಡೆದಿದೆ.
ಮಧ್ಯಾಹ್ನ ಈಜಲು ತೆರಳಿದ್ದು ನೀರಿನ ಸೆಳೆತ ಹೆಚ್ಚಾಗಿರುವುದರಿಂದ ಈಜಲು ಹೋಗಿದ್ದ ಮಹಾರಾಷ್ಟ್ರದ ಅಮರಾವತಿಯ ವಿಕಾಸ್ ಬೋಸ್ಲೆ 18 ವರ್ಷ
ಯುವಕ ನೀರುಪಾಲಾಗಿದ್ದಾನೆ.. ಜಾತ್ರೆಗಾಗಿ ಅಂಗಡಿ ಹಾಕಲು ಬಂದಿದ್ದ ಕುಟುಂಬದ ಈ ಯುವಕ ಈಜಲು ಹೋಗಿ ನೀರಿನಿಂದ ಹೊರ ಬರಲು ಪ್ರಯತ್ನ ಪಟ್ಟಿದ್ದಾನೆ.ಆದರೆ ನೀರಿನ ಸೆಳೆತ ಹೆಚ್ಚಾಗಿದ್ದು ಇದರಿಂದ ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.
ಸ್ಥಳದಲ್ಲಿ ಅಗ್ನಿಶಾಮಕದಳ ಹಾಗೂ ಸ್ಥಳೀಯ ಈಜುಪಟು ಪ್ರಮೋದ್ ಪೂಜಾರಿ ನೀರಿನಲ್ಲಿ ಈಜಿ ಶೋಧ ನಡೆಸಿದರು ಸಿಗಲಿಲ್ಲ. ಆ ನಂತರ ಈಶ್ವರ್ ಮಲ್ಪೆ ಬಂದು ಶೋಧ ನಡೆಸಿ ಮೃತದೇಹ ಹೊರಕ್ಕೆ ತೆಗೆದಿದ್ದಾರೆ..
Tags:
ತೀರ್ಥಹಳ್ಳಿ ಸುದ್ದಿ