ತುಂಗಾ ತೀರದಲ್ಲಿ ಐ ❤️ ತೀರ್ಥಹಳ್ಳಿ ಸೆಲ್ಫಿ ಪಾಯಿಂಟ್
ಗೀತಾ ರಮೇಶ್ ಅವರ ಕನಸಿನ ಕೂಸಿಗೆ ಚಾಲನೆ
ತೀರ್ಥಹಳ್ಳಿ : ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಗಾಗಿ ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿದ್ದು ಈ ಬಾರಿ ಮಾಧವ ಮಂಗಳ ಮಂದಿರಕ್ಕೆ ಹೋಗುವ ರಸ್ತೆಯಲ್ಲಿ ಜಯಚಾಮರಾಜೇಂದ್ರ ಕಮಾನು ಸೇತುವೆ ಕಾಣುವ ಹಾಗೆ ಐ ❤️ ತೀರ್ಥಹಳ್ಳಿ ಎಂಬ ಸೆಲ್ಫಿ ಪಾಯಿಂಟ್ ನಿರ್ಮಾಣಗೊಂಡಿದ್ದು ಇದು ಜಾತ್ರೆಯ ಹೈಲೈಟ್ ಸ್ಪಾಟ್ ಆಗಲಿದೆ.
ಕಳೆದ ವರ್ಷ ಗೀತಾ ರಮೇಶ್ ಅವರ ಅಧ್ಯಕ್ಷತೆಯಲ್ಲಿ ಐ ❤️ ತೀರ್ಥಹಳ್ಳಿ ಎಂಬ ಸೆಲ್ಫಿ ಪಾಯಿಂಟ್ ನಿರ್ಮಾಣ ಮಾಡಲು
ಯೋಜನೆಯನ್ನು ರೂಪಿಸಲಾಗಿತ್ತು. ಕಳೆದ ವರ್ಷದ ಜಾತ್ರೆಯಲ್ಲಿ ಈ ಸೆಲ್ಫಿ ಪಾಯಿಂಟ್ ನಿರ್ಮಾಣ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಿ
ಈ ಬಾರಿ ಜಾತ್ರೆಗೆ ಗೀತಾ ರಮೇಶ್ ಅವರೇ ಯೋಜನೆಯನ್ನ
ನಿರ್ಮಾಣ ಮಾಡಿದ್ದಾರೆ.
ಈಗಾಗಲೇ ತುಂಗಾ ನದಿ ತೀರದ ದಡದಲ್ಲಿ ಪರಶುರಾಮನ ಪ್ರತಿಮೆ ಒಂದು ಕಡೆ ಹಾಟ್ ಸ್ಪಾಟ್ ಆದರೆ ಜಯಚಾಮರಾಜೇಂದ್ರ ಸೇತುವೆ ಸಮೀಪದ ಐ ❤️ ತೀರ್ಥಹಳ್ಳಿ ಮತ್ತೊಂದು ಹಾಟ್ ಸ್ಪಾಟ್ ಆಗಲಿದೆ. ಈಗಾಗಲೇ ಐ ❤️ ತೀರ್ಥಹಳ್ಳಿ ಸೆಲ್ಫಿ ಪಾಯಿಂಟ್ ಬಳಿ ನೂರಾರು ಮಂದಿ ಬಂದು ಫೋಟೋ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದಾರೆ.
ಈ ಸುಂದರ ಸೆಲ್ಫಿ ಪಾಯಿಂಟ್ ನಿರ್ಮಾಣ ಮಾಡಿದ್ದು ಯುವ ಗುತ್ತಿಗೆದಾರ ಶ್ರೇಯಸ್ ರಾವ್..