ರಾಮಕೊಂಡದ ಬಳಿ ಕಣ್ಮನ ಸೆಳೆಯುತ್ತಿದೆ ವಿದ್ಯುತ್ ದೀಪಾಲಂಕಾರ Jatre

ರಾಮಕೊಂಡದ ಬಳಿ ಕಣ್ಮನ ಸೆಳೆಯುತ್ತಿದೆ ವಿದ್ಯುತ್ ದೀಪಾಲಂಕಾರ 

ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಹಿನ್ನಲೆಯಲ್ಲಿ ಈ ಬಾರಿ ವಿಶೇಷತೆಗಳಿದ್ದು ಅದೆಲ್ಲದಕ್ಕಿಂತ ಕಣ್ಮನ ಸೆಳೆಯುವುದು ವಿದ್ಯುತ್ ದೀಪಾಲಂಕಾರ. ಕಳೆದ ಆರು ವರ್ಷಗಳಿಂದ ರಾಮಕೊಂಡ ಹೋಗುವ ಮಾರ್ಗಕ್ಕೆ ಬಾಳೆಬೈಲಿನ ಎಸ್ ಎ ಎಸ್ ನ ರಕ್ಷಿತ್ ತೊಂಬ್ಳೆ ಅವರ ನೇತೃತ್ವದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಇದು ತೀರ್ಥ ಸ್ನಾನಕ್ಕೆ ಬರುವ ಭಕ್ತರ ಕಣ್ಮನ ಸೆಳೆಯುತ್ತಿದೆ.


ರಾಮಮಂಟಪಕ್ಕೆ ವಿದ್ಯುತ್ ದೀಪಾಲಂಕಾರ ಜೊತೆಗೆ ಓಂ ನಮಃ ಶಿವಾಯ ಎಂಬ ಧ್ವನಿ ಭಕ್ತರ ಕಿವಿ ತಂಪಾಗಿಸುತ್ತಿದೆ. ಲಕ್ಷಾಂತರ ಜನ ಬಂದು ತಮ್ಮ ಪಾಪ ತೊಳೆದುಕೊಳ್ಳಲು ತೀರ್ಥಸ್ನಾನ ಮಾಡುವ ಈ ರಾಮಕೊಂಡದ ಮಾರ್ಗದಲ್ಲಿ ಪ್ರತಿ ವರ್ಷ ಸಹ ವಿದ್ಯುತ್ ದೀಪಗಳು ಜಗಮಗಿಸುತ್ತಿದ್ದು 
ಬಂದಂತಹ ಭಕ್ತರ ಕಣ್ಮನ ಸೆಳೆಯುತ್ತಿವೆ.

ಇದರ ಜೊತೆಗೆ ಈ ಬಾರಿ ನಿರ್ಮಿಸಿರುವ ಪರಶುರಾಮನ ಪ್ರತಿಮೆ ಹಿಂಭಾಗ ಕಾಣುವ ರಾಮಮಂಟಪ ವಿದ್ಯುತ್ ದೀಪದಿಂದ ಜಗಮಗಿಸುತ್ತಿದ್ದು ಜಾತ್ರೆಗೆ ಬಂದ ಸಾರ್ವಜನಿಕರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.
ಕಳೆದ ಆರು ವರ್ಷದಿಂದ ರಾಮಕೊಂಡಕ್ಕೆ ಹೋಗುವ ಮಾರ್ಗಕ್ಕೆ ವಿದ್ಯುತ್ ದೀಪಗಳನ್ನು ಹಾಕುತ್ತಿರುವ ರಕ್ಷಿತ್ ಅವರಿಗೆ ಜಾತ್ರಾ ಸಮಿತಿ ಸೇರಿ ಹಲವರು ಶುಭ ಹಾರೈಸಿದ್ದಾರೆ.. 






Previous Post Next Post