ರಾಮೇಶ್ವರ ದೇವರ ಜಾತ್ರೆಯ ಹೊರೆಕಾಣಿಕೆ ವಾಹನಕ್ಕೆ ಚಾಲನೆ jatre

ರಾಮೇಶ್ವರ ದೇವರ ಜಾತ್ರೆಯ ಹೊರೆಕಾಣಿಕೆ ವಾಹನಕ್ಕೆ ಚಾಲನೆ

ತೀರ್ಥಹಳ್ಳಿ : ಪಟ್ಟಣದ ಪುರಾಣ ಪ್ರಸಿದ್ಧ ಶ್ರೀರಾಮೇಶ್ವರ
ದೇವರ ವಾರ್ಷಿಕ ಜಾತ್ರಾ ಮಹೋತ್ಸವವು ದಿನಾಂಕ 19-12-
2025 ರಿಂದ 21-12-2025ರ ವರೆಗೆ ಮೂರು ದಿವಸಗಳ ಕಾಲ ಅತೀ ವೈಭವ ಮತ್ತು ವಿಜೃಂಭಣೆಯಿಂದ ನೆರವೇರಲಿದೆ.

ಈ ಸಂಬಂಧ ಇಂದು ಗುರುವಾರ ತೀರ್ಥಹಳ್ಳಿಯ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಹೊರೆಕಾಣಿಕೆ ವಾಹನಗಳ ಪ್ರಥಮ ಪೂಜೆಯನ್ನು ನೆರವೇರಿಸಿ ಚಾಲನೆ ನೀಡಲಾಯಿತು. ತಾಲೂಕಿನ ಪ್ರತಿಯೊಂದು ಭಾಗದಲ್ಲಿ ಈ ವಾಹನಗಳು ಸಂಚಾರ ನಡೆಸಲಿದೆ.

ಸದ್ಭಕ್ತರು ತಮ್ಮ ಮನೆಯಲ್ಲಿ ಬೆಳೆದ ದವಸ ಧಾನ್ಯ ತರಕಾರಿ
ಅಕ್ಕಿ, ಕಾಯಿ ಇನ್ನಿತರ ವಸ್ತುಗಳನ್ನು ಹಸಿರು ಹೊರೆ ಕಾಣಿಕೆ
ರೂಪದಲ್ಲಿ ಕೊಡುವುದರ ಮೂಲಕ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅನ್ನ ದಾಸೋಹ ಮಿತ್ರ ವೃಂದ
ಸಮಿತಿಯವರು ವಿನಂತಿಸಿದ್ದಾರೆ.

ಈ ಸಂಧರ್ಭದಲ್ಲಿ, ತಹಸೀಲ್ದಾರ್ ರಂಜಿತ್, ಜಾತ್ರೋತ್ಸವ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ, ಪಟ್ಟಣ ಪಂಚಾಯತ್ ಪ್ರಭಾರ ಅಧ್ಯಕ್ಷರಾದ ಗೀತಾ ರಮೇಶ್, ಜಯಪ್ರಕಾಶ್ ಶೆಟ್ಟಿ, ಸುಶೀಲ ಶೆಟ್ಟಿ, ಅಮರಾನಾಥ್ ಶೆಟ್ಟಿ ಅನ್ನದಾಸೋಹ ಸಮಿತಿಯ ಗಿರೀಶ್, ಅನಿಲ್, ವಾದಿರಾಜ್, ಸೇರಿದಂತೆ ವಾಹನ ಚಾಲಕರಾದ ವಿನಯ್, ಅನಂತ ಪದ್ಮಾನಾಭ, ಪ್ರೇಕ್ಷಿತ್ ಪುಣ್ಯಕೋಟಿ, ಸುಜಿತ್ ಕುಶಾವತಿ, ಜಯಸೂರ್ಯ ಕಲ್ಲೂಕುಡಿಗೆ, ಪವನ್, ರಾಮು ಇದ್ದರು.

ಪ್ರತಿ ದಿನ ಯಾವ ಯಾವ ಭಾಗದಲ್ಲಿ ಹಸಿರು ಹೊರೆ ಕಾಣಿಕೆ
ವಾಹನ ಸಂಚಾರ ಮಾಡಲಿದೆ ಎಂಬುದು ಶಿವಮೊಗ್ಗ ಸುದ್ದಿ
ಮಾಧ್ಯಮದಲ್ಲಿ ಪ್ರಕಟಗೊಳ್ಳಲಿದೆ.
Previous Post Next Post