ಎಳ್ಳಮಾವಾಸ್ಯೆ ಜಾತ್ರೆ ಪ್ರಯುಕ್ತ ರಾಮಕೊಂಡದಲ್ಲಿ ಸಾವಿರಾರು ಭಕ್ತರಿಂದ ತೀರ್ಥಸ್ನಾನ jatre

ಎಳ್ಳಮಾವಾಸ್ಯೆ ಜಾತ್ರೆ ಪ್ರಯುಕ್ತ ರಾಮಕೊಂಡದಲ್ಲಿ ಸಾವಿರಾರು ಭಕ್ತರಿಂದ ತೀರ್ಥಸ್ನಾನ

ತೀರ್ಥಹಳ್ಳಿ: ಮಲೆನಾಡಿನ ಪ್ರತಿಷ್ಠಿತ ಎಳ್ಳಮಾವಾಸ್ಯೆ ಜಾತ್ರೆಯ ಮೊದಲ ದಿನದ ಕಾರ್ಯಕ್ರಮವಾಗಿ ಇಲ್ಲಿನ ತುಂಗಾನದಿಯ ನಡುವಿನ ಶ್ರೀರಾಮ ಕೊಂಡದಲ್ಲಿ ಸಾವಿರಾರು ಭಕ್ತಾದಿಗಳು ತೀರ್ಥಸ್ನಾನ ಮಾಡುವುದರೊಂದಿಗೆ ಪುನೀತರಾದರು.

ತಾಯಿಯ ಹತ್ಯೆ ಮಾಡಿದ ಪಾಪ ಪರಿಹಾರದ ಪುಣ್ಯ ಕ್ಷೇತ್ರವಾಗಿರುವ ತೀರ್ಥಹಳ್ಳಿಯಲ್ಲಿ ಎಳ್ಳಮಾವಾಸ್ಯೆ ಪ್ರಯುಕ್ತ
ತುಂಗಾನದಿಯಲ್ಲಿ ಇಂದು ಬೆಳಗಿನ ಜಾವ 5ಗಂಟೆಗೆ
ಶ್ರೀರಾಮೇಶ್ವರ ದೇವರಿಗೆ ಸಂಪ್ರೋಕ್ಷಣೆ, ಪೂಜಾ ಕಾರ್ಯ ನಡೆಯಿತು. ಪ್ರಧಾನ ತಂತ್ರಿಗಳಾದ ಲಕ್ಷ್ಮೀಶ್ ತಂತ್ರಿ ಅವರ ಆಚಾರ್ಯತ್ವದಲ್ಲಿ ನಡೆದ ಪೂಜೆ ನಂತರ ಸಾವಿರಾರು ಭಕ್ತರು ಪರಶುರಾಮಕೊಂಡದಲ್ಲಿ ತೀರ್ಥಸ್ನಾನ ಮಾಡಿ ಪುನೀತರಾದರು.

ತಾಲೂಕಿನ ನಾಡ ದೇವತೆ ಎಂದೇ ಹೆಸರಾಗಿರುವ
ಶ್ರೀರಾಮೇಶ್ವರ ದೇವರ ಸನ್ನಿಧಿಯಲ್ಲಿ ನಡೆಯುವ
ಎಳ್ಳಮಾವಾಸ್ಯೆ ಜಾತ್ರೆಯ ತೀರ್ಥಸ್ನಾನ ಇಂದು ಅತ್ಯಂತ
ವಿಜೃಂಭಣೆಯಿಂದ ನೆಡೆಯಿತು. ಭಕ್ತಾದಿಗಳು ಸಾಲುಸಾಲಾಗಿ
ಬಂದು ತೀರ್ಥಸ್ನಾನದಲ್ಲಿ ಪಾಲ್ಗೊಂಡಿದ್ದರು. ತುಂಗಾನದಿಯ
ಸುತ್ತಮುತ್ತ ಬಿಗಿ ಪೊಲೀಸ್ ಹಾಗೂ ಗೃಹರಕ್ಷಕ ದಳದ ಭದ್ರತೆ
ಆಯೋಜನೆ ಮಾಡಲಾಗಿತ್ತು.

ಇಂದಿನ ತೀರ್ಥಸ್ನಾನಕ್ಕೆ ಹೊರ ಜಿಲ್ಲೆ ಹಾಗೂ ಬೇರೆ
ಊರುಗಳಿಂದಲೂ ಭಕ್ತಾದಿಗಳು ಆಗಮಿಸಿದ್ದರು.
ತಾಲೂಕು ದಂಡಾಧಿಕಾರಿಗಳಾದ ರಂಜಿತ್, ಜಾತ್ರಾ ಸಮಿತಿ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ, ಸೇರಿ ಎಲ್ಲಾ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಪ್ರಮುಖರು ಭಾಗಿಯಾಗಿದ್ದರು.





Previous Post Next Post