ದೇವರ ಮಕ್ಕಳ ಶಾಲೆಯಲ್ಲಿ ಕುಮಾರಸ್ವಾಮಿಯವರ ಜನ್ಮದಿನ ಆಚರಿಸಿದ ಜನತಾದಳ ಕಾರ್ಯಕರ್ತರು jds

ದೇವರ ಮಕ್ಕಳ ಶಾಲೆಯಲ್ಲಿ ಕುಮಾರಸ್ವಾಮಿಯವರ ಜನ್ಮದಿನ ಆಚರಿಸಿದ ಜನತಾದಳ ಕಾರ್ಯಕರ್ತರು

ತೀರ್ಥಹಳ್ಳಿ : ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರ ಜನ್ಮದಿನವನ್ನು  ತೀರ್ಥಹಳ್ಳಿ ತಾಲೂಕು ಜಾತ್ಯಾತೀತ ಜನತಾದಳದ ಅಧ್ಯಕ್ಷರು ಮತ್ತು ಕಾರ್ಯಕರ್ತರು ವಿಶೇಷ ರೀತಿಯಲ್ಲಿ ಆಚರಿಸಿದರು.

ಪಟ್ಟಣದ ಸೊಪ್ಪುಗುಡ್ಡೆಯಲ್ಲಿರುವ ವಿಕಲ ಚೈತನ್ಯ ದೇವರ ಮಕ್ಕಳ ಶಾಲೆಯಲ್ಲಿ ಕುಮಾರಸ್ವಾಮಿ ಅವರ ಜನ್ಮದಿನವನ್ನು ಆಚರಿಸಲಾಯಿತು. ಮಕ್ಕಳಿಗೆ ಸಿಹಿ ಊಟವನ್ನು ನೀಡಲಾಯಿತು. ಈ ವೇಳೆ ಮಕ್ಕಳು ಕುಮಾರಸ್ವಾಮಿಯವರಿಗೆ ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಕುಣಜೆ ಕಿರಣ್ ಪ್ರಭಾಕರ್, ಎಲ್ ಡಿ ಶೈಲಾ ನಾಗರಾಜ್, ಮೆದೊಳಗೆ ರಾಮಸ್ವಾಮಿ,  ಡಾ ಪ್ರೇಮಚಂದ್ರ, ವಿನಯ್ ಬಸವಾನಿ, ರತನ್ ಕಮ್ಮರಡಿ ಮತ್ತು ತೀರ್ಥಹಳ್ಳಿ ತಾಲೂಕು ಯುವ ಜನತಾದಳ ಅಧ್ಯಕ್ಷರಾದ ರಾಘವೇಂದ್ರ ತಲಬಿ ಸೇರಿ ಇತರರು ಉಪಸ್ಥಿತರಿದ್ದರು
Previous Post Next Post