ಎಳ್ಳಮಾವಾಸ್ಯೆ ಜಾತ್ರೆಯ ಪೂರ್ವ ಸಿದ್ಧತೆ ವೀಕ್ಷಿಸಿದ ತಹಸೀಲ್ದಾರ್ ರಂಜಿತ್ jatre

ಎಳ್ಳಮಾವಾಸ್ಯೆ ಜಾತ್ರೆಯ ಪೂರ್ವ ಸಿದ್ಧತೆ ವೀಕ್ಷಿಸಿದ ತಹಸೀಲ್ದಾರ್ ರಂಜಿತ್

ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಅಂಗವಾಗಿ ಈಗಾಗಲೇ ಎಲ್ಲಾ ತಯಾರಿಗಳು ನಡೆಯುತ್ತಿದ್ದು ಪಟ್ಟಣ ಪಂಚಾಯತ್, ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮೂರು ದಿನ ಪರ್ಯಂತ ನಡೆಯುವ ಈ ಜಾತ್ರೆಗೆ ಲಕ್ಷಾಂತರ ಮಂದಿ ಸೇರುವ ನಿರೀಕ್ಷೆ ಇರುವುದರಿಂದ ಅದರಲ್ಲೂ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ತೀರ್ಥ ಸ್ನಾನಕ್ಕೆ ಸಾವಿರಾರು ಜನರು ಆಗಮಿಸುವುದರಿಂದ ರಾಮಕುಂಡದ ಬಳಿ ಪರಿಶೀಲನ ನಡೆಸಲಾಯಿತು.

ತಾಲೂಕು ದಂಡಾಧಿಕಾರಿಗಳಾದ ರಂಜಿತ್ ಹಾಗೂ ತೀರ್ಥಹಳ್ಳಿಯ ಇನ್ಸ್ಪೆಕ್ಟರ್ ಇಮ್ರಾನ್ ಬೇಗ್ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಆಗಿರುವಂತಹ ಸುಷ್ಮಾ ಇವರುಗಳು ರಾಮಕುಂಡದ ಬಳಿ ತೆರಳಿ ಪರಿಶೀಲನೆ ನಡೆಸಿದರು. ಈಗಾಗಲೇ ರಾಮಕುಂಡದ ಬಳಿ ಸಕಲ ಸಿದ್ಧತೆ ನಡೆದಿದ್ದು ಸ್ನಾನಕ್ಕೆ ಬರುವವರೆಗೆ ಕಿರು ಸೇತುವೆ ಹಾಗೂ ಮರಳು ಚೀಲಗಳನ್ನ ಹಾಸಲಾಗಿದೆ. ಆದರೆ ಈ ಬಾರಿ ನೀರಿನ ಸೆಳೆತ ಅತಿ ಹೆಚ್ಚಾಗಿರುವುದರಿಂದ ಇನ್ನಷ್ಟು ಮರಳು ಚೀಲ ಹಾಕುವಂತೆ ತಿಳಿಸಿದರು.

ಬರುವಂತಹ ಭಕ್ತಾದಿಗಳಿಗೆ ತೀರ್ಥ ಸ್ಥಾನದ ದಿನ ಅತ್ಯಂತ ಕಟ್ಟೆಚ್ಚರದಿಂದ ಇರುವಂತೆ ಹಾಗೂ ಜಾತ್ರಾ ಸಮಯದಲ್ಲಿ ಯಾವುದೇ ವ್ಯಕ್ತಿಗಳು ತುಂಗಾ ನದಿಯ ನೀರಿನಲ್ಲಿ ಇಳಿಯದಂತೆ ಸೂಚಿಸಿದರು. ಕಿರು ಸೇತುವೆ ಒಂದು ಕಡೆ ವಾಲಿ ನಿಂತಿದ್ದನ್ನು ಕಂಡು ಸ್ಥಳದಲ್ಲೇ ಕರೆಸಿ ಅದನ್ನು ಸರಿಪಡಿಸುವಂತೆ ಸೂಚಿಸಿದರು. ಇದಕ್ಕೂ ಮೊದಲು
ರಥದ ಬಳಿ ತೆರಳಿ ನೂತನ ಚಕ್ರ ಹಾಗೂ ಕಟ್ಟಲಾಗುತ್ತಿರುವ ರಥದ ಧ್ವಜವನ್ನು ವೀಕ್ಷಿಸಿದರು.

ನಂತರ ತುಂಗಾ ನದಿಯ ಮರಳು ದಂಡೆಯ ಮೇಲೆ ಹಾಕಿರುವ ಪರಶುರಾಮನ ಪ್ರತಿಮೆ ವೀಕ್ಷಿಸಿ ತಾವು ಫೋಟೋ ತೆಗೆದುಕೊಂಡು ಸಂತಸಪಟ್ಟರು. ಇದೆ ರೀತಿಯ ಪ್ರತಿಮೆ ಶಾಶ್ವತವಾಗಿ ಉಳಿಯುವಂತೆ ಮಾಡಬೇಕು ಎಂದು ತೆಪ್ಪೋತ್ಸವ ಸಮಿತಿ ಸಂಚಾಲಕ ಡಾ. ಸುಂದರೇಶ್ ಬಳಿ ಚರ್ಚಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ದೀಪಕ್, ಪ್ರಸನ್ನ, ಸವಿತಾ ಹಾಗೂ ಸಮಿತಿ ಸದಸ್ಯರಾದ ಶ್ರೀಕಾಂತ್ ಬೆಟ್ಟಮಕ್ಕಿ, ಹರೀಶ್ ಮಿಲ್ಕೆರಿ, ಸೇರಿ ಹಲವರು ಉಪಸ್ಥಿತರಿದ್ದರು..
Previous Post Next Post