ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಹೊರೆಕಾಣಿಕೆಗಾಗಿ ನಾಳೆ ವಾಹನ ಸಂಚರಿಸುವ ಮಾರ್ಗಗಳು ಯಾವುದು..!? jatre

ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಹೊರೆಕಾಣಿಕೆಗಾಗಿ ನಾಳೆ ವಾಹನ ಸಂಚರಿಸುವ ಮಾರ್ಗಗಳು ಯಾವುದು..!?

ತೀರ್ಥಹಳ್ಳಿ : ಶ್ರೀ ರಾಮೇಶ್ವರ ಅನ್ನದಾಸೋಹ ಮಿತ್ರವೃಂದದ ವತಿಯಿಂದ ಸತತವಾಗಿ ಹದಿನೈದು ವರ್ಷಗಳಿಂದ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಅನ್ನಸಂತರ್ಪಣೆ ನಡೆಯುತ್ತಿದ್ದು ಈ ಬಾರಿ ಒಟ್ಟು ಏಳು ದಿನಗಳ ಪರ್ಯಂತ ಅನ್ನಸಂತರ್ಪಣೆ ನಡೆಯಲಿದೆ. ಅನ್ನದಾಸೋಹಕ್ಕೆ ತಾಲೂಕಿನ ಎಲ್ಲಾ ಸದ್ಭಕ್ತರು ಪಾಲ್ಗೊಳ್ಳಲು ತಿಳಿಸಲಾಗಿದೆ. ಹಾಗೆ ರಾಮೇಶ್ವರ ದೇವಸ್ಥಾನ ವತಿಯಿಂದ ಹೊರಕಾಣಿಕೆ ವಾಹನ ಗುರುವಾರದಿಂದ ಹೊರಟಿದೆ.

ನಾಳೆ (12-12-25) ರಂದು ಕಮ್ಮರಡಿ, ಅರೇಹಳ್ಳಿ, ಹಾಲುಮತ್ತೂರ್, ಚಿಕ್ಕಳೂರು, ಚಿಪ್ಪಳಕಟ್ಟೆ, ಮೈಥಾನಿ, ಹೆಗ್ಗೋಡು,  ಚಕ್ಕೊಡಬೈಲು, ಆಲಗೇರಿ, ಕೋಡ್ಲು. 

ಹೊಸೂರ್, ಗುಡ್ಡೆಕೇರಿ, ಕೆಂದಾಳಬೈಲು, ನಾಲೂರು, ಅರೆಕಲ್ಲು, ಶಿರೂರು, ಪಡುವಳ್ಳಿ, ಮೇಗರವಳ್ಳಿ, ಕರುಣಾಪುರ, ಕಲ್ಮನೆ, MK ಬೈಲು, ಕೈಮರ, ಗಂಟೆಹಕ್ಲು.

ಕವಲೇದುರ್ಗ, ಕೌರಿಬೈಲು, ಮತ್ತುಗ, ಅಂದಬೈಲು, ಕೊಳವಳ್ಳಿ, ಕೊಕ್ಕೊಡು-ಸಾತ್ ಗೋಡು ರಸ್ತೆ, ಕೆಸ್ತೂರು, ಬಾಳೆಕೊಪ್ಪ, ಬಿಳಲುಕೊಪ್ಪ, ಭೀಮನಕಟ್ಟೆ, ಹಳ್ಳಿಬೈಲು, ರಂಜದಕಟ್ಟೆ, ಶಿವರಾಜಪುರ.

ಮೃಗವಧೆ, ಶೇಡ್ಗಾರು, ಹೊಸಳ್ಳಿ, ಹೆದ್ದೂರ್, ಕುಂಚೇರಿ, ಕಟ್ಟೆಹಕ್ಕಲು, ಬೊಮ್ಮನಹಳ್ಳಿ, ಹೆರಂಭಾಪುರ, ಬಸರವಳ್ಳಿ, ಮಂಗಳಗಾರು, ಹುಲಿಮಂಡೆ, ಹೊಸಕೊಪ್ಪ, ಆಲ್ಮನೆ, ಕೂಳೂರು ಭಾಗಗಳಿಗೆ ಹೊರೆಕಾಣಿಕೆ
ವಾಹನ ಬರಲಿದೆ.

ಸದ್ಭಕ್ತರು ತಮ್ಮ ಮನೆಯಲ್ಲಿ ಬೆಳೆದ ದವಸ ಧಾನ್ಯ ತರಕಾರಿ
ಅಕ್ಕಿ, ಕಾಯಿ ಇನ್ನಿತರ ವಸ್ತುಗಳನ್ನು ಹಸಿರು ಹೊರೆ ಕಾಣಿ
ರೂಪದಲ್ಲಿ ಕೊಡುವುದರ ಮೂಲಕ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅನ್ನ ದಾಸೋಹ ಮಿತ್ರ ವೃಂದಸಮಿತಿಯವರು ವಿನಂತಿಸಿದ್ದಾರೆ.
Previous Post Next Post