ಎಳ್ಳಮಾವಾಸ್ಯೆ ಜಾತ್ರೆಗೆ ಪೊಲೀಸ್ ವ್ಯವಸ್ಥೆ ಹೇಗಿರುತ್ತೆ? - ಡಿವೈಎಸ್ ಪಿ ಹೇಳಿದ್ದೇನು..!?
ತೀರ್ಥಹಳ್ಳಿ : ಎಳ್ಳಮಾವಾಸ್ಯೆ ಜಾತ್ರೆಗೆ ಈಗಾಗಲೇ ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯತ್ ನಿಂದ ಸಿದ್ಧತೆ ನಡೆಯುತ್ತಿದೆ. ಇದಕ್ಕಿಂತ ಹೆಚ್ಚು ಪೋಲೀಸರ ಕೆಲಸ ಹೆಚ್ಚಾಗಿರುತ್ತದೆ. ಹಾಗಾಗಿ ಈಗಾಗಲೇ ಬೇಕಾಗುವ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಜಾತ್ರೆ ನಡೆಯುವ ರಸ್ತೆಯಲ್ಲಿ ಸಿಸಿಟಿವಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಡಿವೈಎಸ್ ಪಿ ಅರವಿಂದ್ ಕಲಗುಜ್ಜಿ ತಿಳಿಸಿದರು.
ಶುಕ್ರವಾರ ಸೊಪ್ಪುಗುಡ್ಡೆಯ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮೂರು ದಿನ ನಡೆಯುವ ಈ ಜಾತ್ರೆಯಲ್ಲಿ ಲಕ್ಷಾಂತರ ಜನ ಸೇರುವುದರಿಂದ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇದು ಸಾರ್ವಜನಿಕರಿಗೆ ಸ್ವಲ್ಪ ತೊಂದರೆ ಆದರೂ ಸಹ ಇದನ್ನು ಪಾಲಿಸಬೇಕಿದೆ. ವಾಹನ ನಿಲುಗಡೆಗೆ ತಾಲೂಕು ಕ್ರೀಡಾಂಗಣ ಹಾಗೂ ಅನಂತಮೂರ್ತಿ ಕ್ರೀಡಾಂಗಣದಲ್ಲಿ 4 ಚಕ್ರ ವಾಹನ ಕುವೆಂಪು ಶಾಲೆ ಮತ್ತು ಪಟ್ಟಣ ಪಂಚಾಯತ್ ಕ್ರೀಡಾಂಗಣದಲ್ಲಿ ದ್ವಿಚಕ್ರ ವಾಹನ ನಿಲುಗಡೆ ಮಾಡುವಂತೆ ತಿಳಿಸಿದರು..
ರಥೋತ್ಸವ ಹಾಗೂ ತೆಪ್ಪೋತ್ಸವ ದಿನ ಮಾರ್ಗ ಬದಲಾವಣೆ ಮಾಡಲು ತೀರ್ಮಾನಿಸಲಾಗಿದೆ. ಮಿಲ್ಕೇರಿ ರಸ್ತೆ ಎರಡು ದಿನಗಳು ಸಹ ಒನ್ ವೇ ಮಾಡಲಾಗುತ್ತದೆ. ತೆಪ್ಪೋತ್ಸವ ದಿನ
ಮಾಧವ ಮಂಗಲ ಬಳಿ, ರಾಮೇಶ್ವರ ದೇವಸ್ಥಾನ ಹಿಂಭಾಗದ ಮೂಲಕ ಛತ್ರಕೇರಿ ರಸ್ತೆ, ಮೂಲಕ ಹಾಗೂ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ಹಾಗೂ ಜಾತ್ರೆ ಸಂದರ್ಭದಲ್ಲಿ ಅಪರಾಧ ಹಿನ್ನಲೆಯುಳ್ಳ ಹಾಗೂ ಸರಗಳ್ಳರ ಬಗ್ಗೆ ಕಣ್ಗಾವಲು ಇಡಲಾಗಿದೆ. ಜಾತ್ರೆಗೆ ಬರುವ ಸಾರ್ವಜನಿಕರು ಸಹ ಸರ, ಮೊಬೈಲ್, ಪರ್ಸ್ ಬಗ್ಗೆ ಅತ್ಯಂತ ಜಾಗೃತರಾಗಿರಬೇಕು ಎಂದು ಹೇಳಿದರು..
ಈ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಇಮ್ರಾನ್ ಬೇಗ್, ಆಗುಂಬೆ ಪೊಲೀಸ್ ಠಾಣಾಧಿಕಾರಿ ಶಿವನಗೌಡ ಸೇರಿ ಹಲವರು ಇದ್ದರು.
Tags:
ಜಾತ್ರೆ ಸುದ್ದಿ