ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಹೊರೆಕಾಣಿಕೆಗಾಗಿ ನಾಳೆ ವಾಹನ ಸಂಚರಿಸುವ ಮಾರ್ಗಗಳು ಯಾವುದು..!? jatre

ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಹೊರೆಕಾಣಿಕೆಗಾಗಿ ನಾಳೆ ವಾಹನ ಸಂಚರಿಸುವ ಮಾರ್ಗಗಳು ಯಾವುದು..!?
ತೀರ್ಥಹಳ್ಳಿ : ಶ್ರೀ ರಾಮೇಶ್ವರ ಅನ್ನದಾಸೋಹ ಮಿತ್ರವೃಂದದ ವತಿಯಿಂದ ಸತತವಾಗಿ ಹದಿನೈದು ವರ್ಷಗಳಿಂದ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಅನ್ನಸಂತರ್ಪಣೆ ನಡೆಯುತ್ತಿದ್ದು ಈ ಬಾರಿ ಒಟ್ಟು ಏಳು ದಿನಗಳ ಪರ್ಯಂತ ಅನ್ನಸಂತರ್ಪಣೆ ನಡೆಯಲಿದೆ. ಅನ್ನದಾಸೋಹಕ್ಕೆ ತಾಲೂಕಿನ ಎಲ್ಲಾ ಸದ್ಭಕ್ತರು ಪಾಲ್ಗೊಳ್ಳಲು ತಿಳಿಸಲಾಗಿದೆ. ಹಾಗೆ ರಾಮೇಶ್ವರ ದೇವಸ್ಥಾನ ವತಿಯಿಂದ ಹೊರಕಾಣಿಕೆ ವಾಹನ ಗುರುವಾರದಿಂದ ಹೊರಟಿದೆ.

ನಾಳೆ (14-12-25) ರಂದು  ತೀರ್ಥಹಳ್ಳಿ ಪಟ್ಟಣದ
ಕುಶಾವತಿ, KC ರಸ್ತೆ, ಕುವೆಂಪು ಲೇಔಟ್, ಹಿಂದೂರುದ್ರಭೂಮಿ ರಸ್ತೆ, ಶಂಕರಗುಡ್ಡ, ಹೈಸ್ಕೂಲ್ ರಸ್ತೆ, ಸೊಪ್ಪುಗುಡ್ಡೆ, ಅಣ್ಣಯ್ಯಗೌಡ ಬಡಾವಣೆ, ಮೀನು ಮಾರ್ಕೆಟ್ ರಸ್ತೆ, ಅನುರಾಧ ನರ್ಸಿಂಗ್ ಹೋಂ ಸುತ್ತಮುತ್ತ, ಸೀಬಿನಕೆರೆ, ಬೆಟ್ಟಮಕ್ಕಿ, ನಾಡತಿ, ಯಡೇಹಳ್ಳಿಕೆರೆ, ಇಂದಿರಾನಗರ, ಗಾಂಧಿನಗರ, ಜಟ್ ಪಟ್ ನಗರ, ಸಿದ್ದೇಶ್ವರ ಬಡಾವಣೆ, ಬಾಳೆಬೈಲ್ ಹಾಗು ಪಟ್ಟಣದ ಎಲ್ಲಾ ಭಾಗಗಳಲ್ಲೂ ಹಸಿರು ಹೊರೆಕಾಣಿಕೆ ಸಂಗ್ರಹಣೆ ಮಾಡಲಿದೆ.

ಇನ್ನುಳಿದಂತೆ  ಚಿಬ್ಬಲಗುಡ್ಡೆ, ಗೋಪಾಲಪುರ, ಮೇಳಿಗೆ, ಕೆಳಕೆರೆ, ಕೋದೂರು, ಸುಳುಗೋಡು, ಕಾಳಗಾರು, ಬುಕ್ಲಾಪುರ, ಹೊರಬೈಲು. ಭಾರತಿಪುರ, ಕೆಸರೆ, ತುಡಕಿ, ಬದನೆಹಿತ್ಲು, ಇಂದಾವರ, ಮಕ್ಕಿಮನೆ, ಯಡಗುಡ್ಡೆ, ಕೊರೋಡಿ, ಕಿತ್ತಿನಗದ್ದೆ, ಶಿರುಪತಿ.

ಮಧುಗೆರೆ, ಕಡಿದಾಳು, ಹೊಳೆಗದ್ದೆ, ಹಾರೋಗೋಳಿಗೆ, ಹರಳಿಮಠ, ಗುಡ್ಡೆಕೊಪ್ಪ, ಬಾಲನಕೊಡಿಗೆ, ಹುಲಿಗುದ್ದು, ಹೊನ್ನಾನಿ, ಹೊಸಕೊಪ್ಪ, ಕಮಕಾರು, ಕೊಕ್ಕೋಡ್ತಿ, ಮುನ್ನೂರು, ಕೋಮನೆ, ಅಲಬಳ್ಳಿ, ಹುಣಸವಳ್ಳಿ, ಕಲ್ಯಾಣಿ ಅಗ್ರಹಾರ, ಬಿಳಿಗೆರೆ, ವಿಠಲನಗರ (ಡಿಪ್ಪೋ), ಗೆರಸ, ಬಿಲಗ, ಹೆಗ್ಗೆಬೈಲು ಭಾಗಗಳಲ್ಲಿ ಸಂಗ್ರಹ ಮಾಡಲಾಗುತ್ತದೆ

ಸದ್ಭಕ್ತರು ತಮ್ಮ ಮನೆಯಲ್ಲಿ ಬೆಳೆದ ದವಸ ಧಾನ್ಯ ತರಕಾರಿ
ಅಕ್ಕಿ, ಕಾಯಿ ಇನ್ನಿತರ ವಸ್ತುಗಳನ್ನು ಹಸಿರು ಹೊರೆ ಕಾಣಿ
ರೂಪದಲ್ಲಿ ಕೊಡುವುದರ ಮೂಲಕ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅನ್ನ ದಾಸೋಹ ಮಿತ್ರ ವೃಂದಸಮಿತಿಯವರು ವಿನಂತಿಸಿದ್ದಾರೆ.

Previous Post Next Post